ಬೆಂಗಳೂರಿನ ಹುಳಿಮಾವು ಸಮೀಪವಿರುವ ದೊಡ್ಡ ಕಮ್ಮನಹಳ್ಳಿ, ಬಳಿ ಪಾಪಿ ಪತಿಯೊಬ್ಬ ಹೆಂಡತಿಯನ್ನು ಕೊಲೆ ಮಾಡಿ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್ ಕೇಸ್ ಗೆ ತುಂಬಿ ಪರಾರಿಯಾಗಿದ್ದಾನೆ.
ಮಹಾರಾಷ್ಟ್ರ ಮೂಲದ ರಾಕೇಶ್ ಕೃತ್ಯ ಎಸಗಿರುವ ಪತಿ, ಗೌರಿ ಅನಿಲ್ ಸಾಂಬೆಕರ್ ಮೃತ ಪತ್ನಿ ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯ ಮನೆಯೊಂದರಲ್ಲಿ ಹೆಂಡತಿಯನ್ನು ಕೊಲೆ ಮಾಡಿರುವ ರಾಕೇಶ್ ಮಹಾರಾಷ್ಟ್ರದಲ್ಲಿರುವ ಪತ್ನಿ ಪೋಷಕರಿಗೆ ಪೋನ್ ಕರೆ ಮಾಡಿ ತಿಳಿಸಿದ್ದಾನೆ.
ಬಳಿಕ ಮನೆಯಿಂದ ರಾಕೇಶ್ ಪರಾರಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಮಾಹಿತಿ ಆಧರಿಸಿ ಸ್ಥಳಕ್ಕೆ ಹುಳಿಮಾವು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

