Breaking
23 May 2026, Sat

ಆನೇಕಲ್ ಪುರಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಮಂಡನೆ

ಆನೇಕಲ್ ಪುರಸಭೆಯ ಸಭಾಂಗಣದಲ್ಲಿ ಇಂದು 2025-26 ನೇ ಸಾಲಿನ ಆಯವ್ಯಯ ಮಂಡನೆ ಮಾಡಲಾಗಿದೆ.

ಪುರಸಭೆಯ ಅಧ್ಯಕ್ಷರಾದ ಸುಧಾ ನಿರಂಜನ್ ಹಾಗೂ ಉಪಾಧ್ಯಕ್ಷರಾದ ಭುವನ ದಿನೇಶ್ ನೇತೃತ್ವದಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಆಯವ್ಯಯವನ್ನು ಮಂಡನೆ ಮಾಡಲಾಗಿದೆ

ಒಟ್ಟು 38 ಕೋಟಿ 49 ಲಕ್ಷದ ಬಜೆಟ್ ನಲ್ಲಿ ಮೂಲಭೂತ ಸೌಲಭ್ಯ ಹಾಗೂ ಹಲವು ಕಲ್ಯಾಣ ಯೋಜನೆಗಳನ್ನ ಅನುಷ್ಟಾನಗೊಳಿಸಲು ಹೆಚ್ಚಿನ ಅನುಧಾನವನ್ನು ಮಿಸಲಿಡಲಾಗಿದೆ.

ಈ ಕುರಿತು ಮಾತನಾಡಿದ ಪುರಸಭೆಯ ಅಧ್ಯಕ್ಷರಾದ ಸುಧಾ ನಿರಂಜನ್ ಈ‌ಬಾರಿಯ ಬಜೆಟ್ ನಲ್ಲಿ ನಗರವನ್ನ ಮತ್ತಷ್ಟು ಸುಂದರಗೊಳಿಸಲು ಪ್ರಮುಖ ಸರ್ಕಲ್ ನಲ್ಲಿ ಕ್ಲಾಕ್ ಟವರ್, ಮುಖ್ಯರಸ್ತೆಯಲ್ಲಿ ಸ್ವಾಗತ ಕಮಾನು‌ ನಿರ್ಮಾಣ ಮಾಡಲು ಚಿಂತನೆ ‌ಮಾಡಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರ, ವಾಯು ಮಾಲಿನ್ಯ ತಡೆಗೆ ಗಿಡ ನೆಡುವ ಕಾರ್ಯಕ್ರಮ ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಸೇರಿಸಲಾಗಿದೆ ಎಂದರು.

ಮಹಿಳೆಯರಿಗೆ ಅನುಕೂಲವಾಗಲು ನಗರದ ಐದು ಪ್ರಮುಖ ಸ್ಥಳಗಳಲ್ಲಿ ಪಿಂಕ್ ಶೌಚಾಲಯ ನಿರ್ಮಾಣ ಮಾಡಲಾಗುವುದು, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಹೆಚ್ಚಿನ ಹಣವನ್ನು ಮೀಸಲಿಡಲಾಗಿದೆ ಎಂದು ಪುರಸಭೆಯ ಉಪಾಧ್ಯಕ್ಷರಾದ ಭುವನ ದಿನೇಶ್ ಮಾಹಿತಿ ನೀಡಿದರು.

ಈ ಬಾರಿ 1 ಕೋಟಿ 27 ಲಕ್ಷ 19 ಸಾವಿರದ 972 ರೂ ಗಳ ಉಳಿತಾಯ ಬಜೆಟ್ ಮಂಡನೆ ಮಾಡಲಾಗಿದೆ.

ಪುರಸಭೆಯ ಮುಖ್ಯಾಧಿಕಾರಿ ಅಮರನಾಥ್ , ಪುರಸಭೆಯ ಸದಸ್ಯರು ಹಾಗೂ ಸಿಬ್ಬಂದಿಗಳು ಆಯವ್ಯಯ ಮಂಡನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply