ಸಿಡಿಲು ಬಡಿದು 21 ಮೇಕೆ ಹಾಗೂ 1 ಹಸು ಧಾರುಣವಾಗಿ ಸಾವನ್ನಪ್ಪಿವೆ. ಕರ್ನಾಟಕ ತಮಿಳುನಾಡು ಗಡಿಭಾಗದ ಅಂಚೆಟ್ಟಿ ಗ್ರಾಮದ ಬಳಿ ಇಂದು ಘಟನೆ ನಡೆದಿದೆ. ಗ್ರಾಮದ ಹಿರೇಗೌಡರ್ ತಮ್ಮ ಜಮೀನಿನಲ್ಲಿ ಹಸು ಹಾಗೂ ಮೇಕೆಗಳನ್ನು ಸಾಕಿದ್ದರು. ಮಳೆ ಬಂದು ಸಿಡಿಲಿನ ಹೊಡೆತಕ್ಕೆ ಜಮೀನಿನಲ್ಲಿ ಸಾಕಿದ್ದ ಹಸು ಹಾಗೂ ಮೇಕೆಗಳು ದಾರುಣವಾಗಿ ಸಾವನ್ನಪ್ಪಿವೆ. ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತ ಹಿರೇಗೌಡರಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಗ್ರಾಮಸ್ಥರು ಅಗ್ರಹಿಸಿದರು.
ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

