Breaking
18 Sep 2026, Fri

ಹುಸ್ಕೂರು ಜಾತ್ರೆಯಲ್ಲಿ ಎರಡು ತೇರುಗಳು ನೆಲಕ್ಕೆ ಅಪ್ಪಳಿಸಿ ಓರ್ವ ವ್ಯಕ್ತಿ ಸಾವು

ಆನೇಕಲ್ ತಾಲೂಕಿನ ಹುಸ್ಕೂರಿನ ಮದ್ದೂರಮ್ಮನ ಜಾತ್ರೆಗೆ ತೆರಳುತ್ತಿದ್ದ ವೇಳೆಯಲ್ಲಿ ಎರಡು ತೇರುಗಳು ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ದೊಡ್ಡ ನಾಗಮಂಗಲದಿಂದ ಹುಸ್ಕೂರಿನ ಐತಿಹಾಸಿಕ ಮದ್ದೂರಮ್ಮ ದೇವಾಲಯಕ್ಕೆ ತೇರನ್ನು ಎಳೆದುಕೊಂಡು ಬರುತ್ತಿದ್ದಾಗ ಜೋರಾಗಿ ಬೀಸಿದ ಗಾಳಿಯಿಂದ ನಿಯಂತ್ರಣ ತಪ್ಪಿ ತೇರು ನೆಲಕಪ್ಪಳಿಸಿದೆ,

ಜೊತೆಗೆ ರಾಯಸಂದ್ರ ಗ್ರಾಮದಿಂದ ಬಂದ ತೇರು ಮದ್ದೂರಮ್ಮ ದೇವಾಲಯದ ಮುಂಭಾಗಕ್ಕೆ ಗಾಳಿಯ ರಭಸಕ್ಕೆ ಪಲ್ಟಿಯಾಗಿದೆ ಪರಿಣಾಮ ತೇರಿನ ಚಕ್ರಕ್ಕೆ ಸಿಲುಕಿ ಓರ್ವ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.

ಮತ್ತೋಬ್ಬನಿಗೆ ಗಾಯವಾಗಿದೆ ಈ ಅವಘಡದಿಂದ ಮದ್ದೂರಮ್ಮ ಜಾತ್ರೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ‌.

Leave a Reply