Breaking
20 Sep 2026, Sun

ಗಂಡ ಹೆಂಡತಿಯ ಜಗಳ ಬಿಡಿಸಲು ಹೋದ ಮಹಿಳೆಗೆ ಇರಿತ

ಗಂಡ ಹೆಂಡತಿಯ ಜಗಳ ಬಿಡಿಸಲು ಹೋದ ಮಹಿಳೆಗೆ ಗಂಡನೇ ಚಾಕು ಇರಿದು ಪೊಲೀಸರಿಗೆ ಅತಿಥಿಯಾಗಿದ್ದಾನೆ. ಆನೇಕಲ್ ತಾಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಗಂಡ ನಟರಾಜ್ ಹಾಗೂ ಹೆಂಡತಿ ಅಜಾರ ತಾಜ್ ಜಗಳ ಆಡುತ್ತಿದ್ದಾಗ ಹಜರ ತಾಜ್ ಅಕ್ಕ ಜಗಳ ಬಿಡಿಸಲು ಹೋಗಿದ್ದಕ್ಕೆ ನಟರಾಜ್ ಸಾಕು ಇರಿದಿದ್ದಾನೆ .45 ವರ್ಷದ ಸಲ್ಮಾ ತಾಜ್ ಗೆ ಚಾಕು ಇರಿದಿದ್ದಕ್ಕೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಪರಿಣಾಮ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ . ಈ ಸಂಬಂಧ ಪ್ರಕರಣ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Reply