Breaking
3 Feb 2026, Tue

ಸಂಸಾರ ಮಾಡಲು ಗಂಡನ ಬಳಿಗೆ ಹಣದ ಬೇಡಿಕೆ ಇಟ್ಟ ಪತ್ನಿ, ವೈಯಾಲಿಕಾವಲ್‌ ಠಾಣೆಯಲ್ಲಿ ಪತಿಯಿಂದ ಪತ್ನಿ ವಿರುದ್ಧ ದೂರು ದಾಖಲು

ಗಂಡನ ಜೊತೆ ಸಂಸಾರ ಮಾಡಲು ಪ್ರತಿ ದಿನ 5 ಸಾವಿರ ಹಣಕ್ಕೆ ಬೇಡಿಕೆ ಇಟ್ಟ ಪತ್ನಿಯ ವಿರುದ್ಧವೇ ಪತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಶ್ರೀಕಾಂತ್ ಎಂಬಾತ ತನ್ನ ಪತ್ನಿ ವಿರುದ್ಧ ಬೆಂಗಳೂರಿನ ವಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಶ್ರೀಕಾಂತ್‌ ಪತ್ನಿ ಧನದಾಹಿಯಾಗಿದ್ದು ಪ್ರತಿದಿನ 5 ಸಾವಿರ ಹಣ ನೀಡುವಂತೆ ಶ್ರೀಕಾಂತ್ ಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಜೊತೆಗೆ ಮಗು ಮಾಡಿಕೊಂಡರೆ ಸೌಂದರ್ಯ ಹಾಳಾಗುತ್ತದೆ ಎಂದು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಪತ್ನಿಯ ಕಿರುಕುಳಕ್ಕೆ ಮನನೊಂದು ಪತಿಯೇ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply