Breaking
20 Sep 2026, Sun

ಕೋಣನಕುಂಟೆ ಸಮೀಪ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಣನಕುಂಟೆ ಸಮೀಪ ರಾಯಲ್ ಎಕ್ಸಲೆಂಟ್ ಅಪಾರ್ಟ್‌ಮೆಂಟ್ ಬಳಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ ರವರಿಂದ ಈ ಒಂದು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ರಾಯಲ್ ಎಕ್ಸಲೆಂಟ್ ಅಪಾರ್ಟ್ಮೆಂಟ್ ಮುಂಭಾಗ ರಸ್ತೆಗಳು ಹಾಳಾಗಿದ್ದು ,ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.

Leave a Reply