ಬೆಂಗಳೂರಿನ ಶಾಂತಿನಗರ ಸಮೀಪವಿರುವ ಬಿಎಂಆರ್‌ಸಿಎಲ್ ಕೇಂದ್ರ ಕಚೇರಿ ಮುಂಭಾಗ ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಬಿಎಂಆರ್‌ಸಿಎಲ್ ಕನ್ನಡ ವಿರೋಧಿ ಧೋರಣೆ ಖಂಡಿಸಿ ಅಧಿಕಾರಿಗಳ ವಿರುದ್ಧ ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.ಲೊಕೋ ಪೈಲೆಟ್ ಆಯ್ಕೆಯಲ್ಲಿ ಕನ್ನಡಿಗರಿಗೆ ಶೇಕಡ 100ರಷ್ಟು ಉದ್ಯೋಗವನ್ನು ನೀಡಬೇಕು. ಇಲ್ಲವಾದಲ್ಲಿ ಎಲ್ಲಾ ಮೆಟ್ರೋ ನಿಲ್ದಾಣದ ಮುಂಬಾಗ ಕನ್ನಡ ಹೋರಾಟಗಾರರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಲಾಯಿತು. ಜೊತೆಗೆ ಮೆಟ್ರೋಬಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಾಂತಿನಗರ ಬಳಿ ಬಿಎಂಆರ್‌ಸಿಎಲ್ ಕಚೇರಿ ಮುಂಭಾಗ ಮೆಟ್ರೋ ಕನ್ನಡ ವಿರೋಧಿ ನೀತಿ ಖಂಡಿಸಿ ಕನ್ನಡ ಹೋರಾಟಗಾರರ ಪ್ರತಿಭಟನೆ

