Breaking
20 Sep 2026, Sun

ಸರ್ಜಾಪುರದಲ್ಲಿ ಹೋಳಿ ಆಚರಣೆ ವೇಳೆ ಮೂವರು ಕೂಲಿ ಕಾರ್ಮಿಕರ ಹತ್ಯೆ, ಸ್ಥಳಕ್ಕೆ ಎಸ್ಪಿ ಸಿಕೆ ಬಾಬಾ ಭೇಟಿ ಪರಿಶೀಲನೆ

ಹೋಳಿ ಹಬ್ಬದ ಆಚರಣೆ ವೇಳೆ ಮಧ್ಯದ ಅಮಲಿನಲ್ಲಿ ಕಾರ್ಮಿಕರ ನಡುವೆ ಗಲಾಟೆ ನಡೆದು ಮೂವರನ್ನ ಹತ್ಯೆ ಮಾಡಲಾಗಿದೆ.

ಆನೇಕಲ್‌ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಿಂಡ್ಲು ಗೆಟ್ ಬಳಿ ಶನಿವಾರ ರಾತ್ರಿ ಘಟನೆ ನಡೆದಿದೆ. ಬಿಹಾರ ಮೂಲದ ಅನ್ನು, ರಾಧೆ ಶ್ಯಾಮ್ ಹಾಗೂ ದೀಪು ಮೃತ ದುರ್ದೈವಿಗಳು. ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ನಲ್ಲಿ ಪಂಬರ್‌ ಕೆಲಸ ಮಾಡುತ್ತಿದ್ದ ಆರು ಮಂದಿ ಕಾರ್ಮಿಕರು ಮಧ್ಯದ ಅಮಲಿನಲ್ಲಿ ಪರಸ್ಪರ ಗಲಾಟೆ ಮಾಡಿಕೊಂಡು ಮೂರು ಜನ ಕೊಲೆಯಾಗಿದ್ದಾರೆ. ಪ್ರಕರಣ ಸಂಬಂಧಪಟ್ಟ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply