ಬೆಂಗಳೂರಿನ ವಿಜಯನಗರ ವಿಧಾನಸಭಾ ಕ್ಷೇತ್ರದ ಕೆಪಿ ಅಗ್ರಹಾರ ವಾರ್ಡಿನಲ್ಲಿ ನೂತನ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಶಾಸಕ ಕೃಷ್ಣಪ್ಪ ಈ ಒಂದು ನೂತನ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಕೆಪಿ ಅಗ್ರಹಾರ ವಾರ್ಡಿನರ ರಸ್ತೆಗಳು ಹಾಳಾಗಿದ್ದು ವಾಹನ ಸಂಚಾರಕ್ಕೆ ಅಸ್ತವ್ಯಸ್ತವಾಗಿತ್ತು. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ .ಈ ಒಂದು ಕಾರ್ಯಕ್ರಮದಲ್ಲಿ ಕೆಪಿ ಅಗ್ರಹಾರ ವಾರ್ಡಿನ ಜನರ ಜೊತೆ ಮಾತುಕತೆ ನಡೆಸಿ ಕುಂದು ಕೊರತೆಗಳನ್ನು ಶಾಸಕ ಕೃಷ್ಣಪ್ಪ ಆಲಿಸಿದರು.

