Breaking
20 Sep 2026, Sun

ದಾಸನಪುರ ಸುರೇಶ್‌ ಕೊಲೆ ಪ್ರಕರಣ ಸಿಓಡಿಗೆ ವಹಿಸುವ ಭರವಸೆ ನೀಡಿದ ಶಾಸಕ ಶಿವಣ್ಣ

ಆನೇಕಲ್‌ನ ದಾಸನಪುರದಲ್ಲಿ ನಡೆದಿರುವ ದಲಿತ ಯುವಕ ಸುರೇಶ್ ಕೊಲೆ ಪ್ರಕರಣವನ್ನು ಸಿಓಡಿಗೆ ವಹಿಸುವಂತೆ ದಲಿತ ಪರ ಒಕ್ಕೂಟಗಳು ಸೇರಿ ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿಯನ್ನ ನಡೆಸಲಾಗುತ್ತಿದೆ. ಆನೇಕಲ್ ಶಾಸಕ ಬಿ ಶಿವಣ್ಣ ಹಾಗೂ ಬೆಂಗಳೂರು ಗ್ರಾಮಾಂತರ ಅಡಿಷನಲ್‌ ಎಸ್ಪಿ ನಾಗರಾಜ್‌ ಸ್ಥಳಕ್ಕೆ ಭೇಟಿ ನೀಡಿ ದಲಿತಪರ ಒಕ್ಕೂಟದ ಮುಖಂಡರು ನೀಡಿದ ಅಹಲವಾಲುಗಳನ್ನು ಆಲಿಸಿದರು. ಈ ಒಂದು ಕೊಲೆ ಪ್ರಕರಣವನ್ನು ಸಿಓಡಿ ಗೆ ನೀಡುತ್ತೆವೆ ಎಂದು ಶಾಸಕ ಶಿವಣ್ಣ ಭರವಸೆಯನ್ನ ನೀಡಿದರು.

Leave a Reply