ವೈಟ್ ಬೋರ್ಡಿನ ಬೈಕ್ ಟ್ಯಾಕ್ಸಿ ಹಾವಳಿಯಿಂದ ಕಂಗೆಟ್ಟಿರುವ ಆಟೋ ಚಾಲಕರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನೂರಾರು ಆಟೋ ಚಾಲಕರು ಸಾಮೂಹಿಕವಾಗಿ ದಯಾಮರಣ ಪತ್ರವನ್ನು ರಾಷ್ಟ್ರಪತಿಗಳಿಗೆ ರವಾನೆ ಮಾಡಿದ್ದಾರೆ. ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಬೈಕ್ ಟ್ಯಾಕ್ಸಿ ಹಾವಳಿಯಿಂದ ಆಟೋ ಚಾಲಕರ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬೈಕ್ ಟ್ಯಾಕ್ಸಿಯನ್ನ ಸಂಪೂರ್ಣವಾಗಿ ನಿಷೇಧ ಮಾಡಬೇಕು ಇಲ್ಲವಾದಲ್ಲಿ ಚಾಲಕರಿಗೆ ದಯಾ ಮರಣ ನೀಡಬೇಕು ಎಂದು ಆಟೋ ಚಾಲಕರು ಮನವಿ ಮಾಡಿದ್ದಾರೆ
ವೈಟ್ ಬೊರ್ಡ್ ಬೈಕ್ ಟ್ಯಾಕ್ಸಿ ಹಾವಳಿ, ಬ್ಯಾಡರಹಳ್ಳಿಯಲ್ಲಿ ಆಟೋ ಚಾಲಕರಿಂದ ರಾಷ್ಟ್ರಪತಿಗಳಿಗೆ ದಯಾಮರಣ ಪತ್ರ

