Breaking
10 Feb 2026, Tue

ರಾಮಸಾಗರದಲ್ಲಿ ಎಸ್‌ಟಿ‌ಪಿ ಘಟಕ ನಿರ್ಮಾಣ, ಜಿಲ್ಲಾಧಿಕಾರಿ ಜಗದೀಶ್ ಪರಿಶೀಲನೆ

ಆನೇಕಲ್ ತಾಲೂಕಿನ ರಾಮಸಾಗರ ಗ್ರಾಮದಲ್ಲಿ 3 ಎಕರೆ ಜಾಗದಲ್ಲಿ ಎಸ್‌ಟಿಪಿ ಘಟಕ ನಿರ್ಮಾಣ ಮಾಡಲು ಜಾಗ ಮಂಜೂರು ಮಾಡಲಾಗಿದ್ದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಇಂದು ಪರಿಶೀಲನೆ ನಡೆಸಿದರು. ರಾಮಸಾಗರ ಗ್ರಾಮದ ಸರ್ವೆ ನಂಬರ್ 111 ರಲ್ಲಿ 7 ಎಕರೆ ಸರ್ಕಾರಿ ಜಾಗವಿದ್ದು, ಇದರಲ್ಲಿ 3 ಎಕರೆ ಎಸ್‌ಟಿಪಿ ಘಟಕ ನಿರ್ಮಾಣ ಮಾಡಲಾಗುತ್ತದೆ ಜೊತೆಗೆ 2 ಎಕರೆ ಜಾಗ ಚಂದಾಪುರ ಪುರಸಭೆ ಹಾಗೂ 2 ಎಕರೆ ಜಾಗ ಬೊಮ್ಮಸಂದ್ರ ಪುರಸಭೆಯ ಕಸ ಸಂಸ್ಕರಣ ಘಟಕಕ್ಕೆ ಮಂಜೂರು ಮಾಡಲಾಗಿದೆ. ಆದರೆ ಸ್ಥಳೀಯರು ಈ ಜಾಗದಲ್ಲಿ ಎಸ್‌ಟಿಪಿ ಘಟಕ ನಿರ್ಮಾಣ ಮಾಡದಂತೆ ವಿರೋಧ ವ್ಯಕ್ತಪಡಿಸಿದರು.

Leave a Reply