ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಕೊಲೆ ಮಾಡಿದ ಪತಿರಾಯ
ಗುಡ್ನಳ್ಳಿ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಕೊಲೆ ಮಾಡಿರುವ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ, 45 ವರ್ಷದ ನೂಕಲಮ್ಮ ಮೃತ ಮಹಿಳೆ, ಒಡಿಶಾ ಮೂಲದ ಗೌರೀಶ್ 54 ಕೊಲೆ ಮಾಡಿರುವ ಅರೋಪಿ, ಪ್ರತಿ ದಿನ ಕುಡಿದು ಬರುತ್ತಿದ್ದ ಗೌರೀಶ್ ಹೆಂಡತಿ ಜೊತೆ ಜಗಳ ತೆಗೆಯುತ್ತಿದ್ದ. ಇಂದು ಸಹ ಕುಡಿದ ಮತ್ತಿನಲ್ಲಿ ಜಗಳ ತೆಗೆದು ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಆನೇಕಲ್ ಪೊಲೀಸರು ಆರೋಪಿಯನ್ನ ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

