ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಕೆರೆಯನ್ನು ಉಳಿಸುವಂತೆ ಗ್ರಾಮಸ್ತರು ಇಂದು ಪ್ರತಿಭಟನೆ ನಡೆಸಿದರು. ಕೆರೆ ಬಳಿ ಆಗಮಿಸಿದ ಗ್ರಾಮಸ್ಥರು ಕೆರೆಗೆ ಕಲುಷಿತ ನೀರು ಹರಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಕೆರೆಗೆ ರಾಸಾಯನಿಕ ಹಾಗೂ ಕಲುಷಿತ ಒಳಚರಂಡಿ ನೀರು ಹರಿಯುತ್ತಿದ್ದು ಇದರಿಂದ ಸುತ್ತಮುತ್ತಲ ಅಂತರ್ಜಲ ಸಂಪೂರ್ಣವಾಗಿ ಮಲಿನವಾಗಿದೆ. ಹೀಗಾಗಿ ಕೆರೆ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಇದ್ದ ಗಮನಹರಿಸಿ ಕೆರೆಯನ್ನು ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು

