Breaking
25 May 2026, Mon

ನೇಣು ಬಿಗಿದುಕೊಂಡು ನವ ವಿವಾಹಿತೆ ಆತ್ಮಹತ್ಯೆ, ಬೆಂಗಳೂರಿನ ಜಾಲಹಳ್ಳಿಯಲ್ಲಿ ಘಟನೆ

ನೇಣು ಬಿಗಿದುಕೊಂಡು ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಜಾಲಹಳ್ಳಿಯಲ್ಲಿ ನಡೆದಿದೆ. 23 ವರ್ಷದ ಪೂಜಾ ಶ್ರೀ ನೇಣಿಗೆ ಶರಣಾದ ವಿವಾಹಿತೆ. ಪುತ್ತೂರು ಮೂಲದ ಪೂಜಾ ಶ್ರೀ ಕಳೆದ ಹತ್ತು ತಿಂಗಳ ಹಿಂದೆ ಪ್ರಕಾಶ್ ಎಂಬುವರನ್ನು ಮದುವೆಯಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ಜಾಲಹಳ್ಳಿ ಸಮೀಪದ ಸಂಬಂಧಿಕರ ಮನೆಗೆ ಬಂದಿದ್ದ ಪೂಜಾ ಶ್ರೀ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ

Leave a Reply