# https://akshayatv.com ## Posts - [ಎಐ ರೋಬೋಟ್ ಟೀಚರ್‌ಗಳನ್ನು ಬಳಸಿಕೊಳ್ಳುತ್ತಿರುವ ಕರ್ನಾಟಕದಲ್ಲಿಯೇ ಎರಡನೆಯ ಶಾಲೆ ಶ್ರೀ ಶಾರದ ಇಂಟರ್ ನ್ಯಾಷನಲ್ ಸ್ಕೂಲ್](https://akshayatv.com/?p=1959): ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಮಂಚನಹಳ್ಳಿ ರಸ್ತೆಯಲ್ಲಿರುವ ಶ್ರೀ ಶಾರದ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಭಿರ ಹಾಗೂ ರಕ್ತದಾನ ಶಿಭಿರದಲ್ಲಿ ಸಾವಿರಾರು ಸಾರ್ವಜನಿಕರು ಬಾಗವಹಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಇನ್ನು ಇದೇ ಸಂಧರ್ಭದಲ್ಲಿ ಎಐ ರೋಬೋಟ್ ಟೀಚರ್ ಗಳನ್ನು ಇಂದು ಮಕ್ಕಳಿಗೆ ಪರಿಚಯಿಸಲಾಯಿತು. ಇನ್ನು ಎಐ ರೋಬೋಟ್ ಟೀಚರ್ ಗಳನ್ನು ಬಳಸಿಕೊಳ್ಳುತ್ತಿರುವ ಕರ್ನಾಟಕದಲ್ಲಿಯೇ ಎರಡನೆ ಶಾಲೆ ಎಂದರೆ ಅದು ಶ್ರೀ ಶಾರದ ಇಂಟರ್ ನ್ಯಾಷನಲ್ ಸ್ಕೂಲ್ ಎಂದರೆ ತಪ್ಪಾಗಲಾರದು. ಇನ್ನು ಉಚಿತ ಆರೋಗ್ಯ ತಪಾಸಣೆ ಶಿಭಿರ ಹಾಗೂ ರಕ್ತದಾನ ಶಿಭಿರಕ್ಕೆ ಮತ್ತು ಎಐ ರೋಬೋಟ್ ಟೀಚರ್ ಗಳನ್ನು ಲೋಕಾರ್ಪಣೆ ಮಾಡಿದ ಖ್ಯಾತ ವೈದ್ಯರಾದ ಡಾ|| ಶ್ರೀಮತಿ ವಿಜಯಲಷ್ಮೀ ಬಾಳೆ ಕುಂದ್ರಿ ರವರು ಮತ್ತು ಖ್ಯಾತ ವೈದ್ಯರಾದ ಡಾ|| ಟಿ.ಎಚ್. ಆಂಜಿನಪ್ಪ ರವರು ಮತ್ತು ಗಣ್ಯರು. ಇನ್ನು ಈ ವೇಳೆ ಶಾರದಾ ಸಮ್ಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಯೋಗೇಶ್ ರವರು ಮಾತನಾಡಿ ನಮ್ಮ ಶಾರದ ಶಿಕ್ಷಣ... - [ನಕಲಿ ಭೂದಾಖಲೆಗಳ ಸೇರ್ಪಡೆ: 16 ಸರ್ಕಾರಿ ನೌಕರರ ಮೇಲೆ ಎಫ್ ಐ ಆರ್](https://akshayatv.com/?p=1944): ಆನೇಕಲ್ ತಾಲ್ಲೂಕಿನ, ಅಭಿಲೇಖಾಲಯ (ರೆಕಾರ್ಡ್ ರೂಮ್ಸ್) ಕಾರ್ಯಾಲಯದ ಕೆಲವು ಸಿಬ್ಬಂದಿಗಳು ಭೂಗಳ್ಳರ ಜೊತೆ ಶಾಮೀಲಾಗಿ ನಕಲಿ ದಾಖಲಾತಿಗಳನ್ನು ಸೇರಿಸಿ ಸರ್ಕಾರಿ ಜಮೀನುಗಳ ಕಬಳಿಕೆಗೆ ಸಹಕರಿಸಿರುವುದು ಕಂಡುಬಂದಿದ್ದು, ಒಟ್ಟು 16 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ ಅವರು ತಿಳಿಸಿದ್ದಾರೆ. ಉಪ ತಹಸಿಲ್ದಾ ರರಾದ ಚಂದ್ರಶೇಖರ್ ಬಿ.ಕೆ, ಶಿರಸ್ತೇದಾರರಾದ ಮಾರುತಿ ಪ್ರಸಾದ್, ದಿನಕರನ್ ಜಿ, ಲೋಕೇಶ್ ಎಸ್, ಪ್ರಥಮ ದರ್ಜೆ ಸಹಾಯಕರಾದ ಮಹೇಶ್, ಮಂಗಳ, ನಾರಾಯಣ, ದ್ವಿತೀಯ ದರ್ಜೆ ಸಹಾಯಕರಾದ ಕೆ ರಾಘವೇಂದ್ರ, ಮಂಜುನಾಥ್ ಎಂ ವಿ, ಡಿ ದರ್ಜೆ ನೌಕರರಾದ ಕಲ್ಪನಾ ಪಿ, ಮಂಜುನಾಥ್, ಶೋಭಾ ಎನ್, ಪ್ರವೀಣ್, ಮುನಿರಾಜು, ಮಂಜುಳಮ್ಮ ಮತ್ತು ಮೀನಾಕ್ಷಿ ಅವರುಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರದೇಶದ ಸರ್ಕಾರಿ ಜಮೀನುಗಳ ಮೂಲ ಮಂಜೂರಾತಿ ಕಡತಗಳು, ದರಖಾಸ್ತು ವಹಿ, ಸಾಗುವಳಿ ಚೀಟಿಗಳು, ಸಾಗುವಳಿ ಚೀಟಿ ವಿತರಣಾ ವಹಿ, ಮಂಜೂರಿ ನಡವಳಿ ವಹಿ, ಇನಾಂ ಡಿಸಿ ಆದೇಶದ ಕಡತಗಳು, ಭೂ... - [ಲಗ್ನಪತ್ರಿಕೆ ಸೋಗಿನಲ್ಲಿ ಒಂಟಿ ಮನೆಯ ಒಡತಿಗೆ ಕತ್ತಿ ಹಿಡಿದು ಬೆದರಿಸಿ ಚಿನ್ನಾಭರಣಗಳ ದರೋಡೆ](https://akshayatv.com/?p=1933): ಆನೇಕಲ್: ತಾಲ್ಲೂಕಿನ ಅತ್ತಿಬೆಲೆ ಪೊಲೀಸ್ ಠಾಣೆಯ ವ್ಯಾಪ್ತಿಯ ನೆರಳೂರು ಗ್ರಾಮದಲ್ಲಿ ಬುಧವಾರ ಹಾಡು ಹಗಲೇ ಪರಿಚಯವೇ ಇಲ್ಲದವರು ಮನೆಗೆ “ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಮನೆ ಮಾಲೀಕಿಯ ಕೈ ಕಾಲು ಕಟ್ಟಿಹಾಕಿ ಮನೆಯಲ್ಲಿದ್ದ 200 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ತಾಲ್ಲೂಕಿನ ನೆರಳೂರು ಗ್ರಾಮದ ಅನಿವಾಸಿಗಳಾದ ನಾಗವೇಣಿ ಮತ್ತು ರವಿಕುಮಾರ್ ಅವರ ಮನೆಗೆ ಆಹ್ವಾನ ಪತ್ರಿಕೆ ನೀಡಲು ಬಂದವರಂತೆ ನಟಿಸಿ ಆದರೋಡೆ ಕಳ್ಳರು ಕೃತ್ಯ ಎಸಗಿದ್ದಾರೆ. ರವಿಕುಮಾರ್ arth ಕಂಪನಿಯಲ್ಲಿನ ಉದ್ಯೋಗಿಯಾಗಿದ್ದು, ಮನೆಯಲ್ಲಿ ನಾಗವೇಣಿ ಅವರು ಒಬ್ಬರೇ ಇರುವುದನ್ನು ಗಮನಿಸಿದ್ದ ಮೂವರು ದುಷ್ಕರ್ಮಿಗಳು ದರೋಡೆಗೆ ಯೋಜನೆ ಅನೇಕಲ್ ತಾಲ್ಲೂಕಿನ ನೆರಳೂರಿನಲ್ಲಿ ಚಿನ್ನಾಭರಣ ಕಳವು ಹಿನ್ನೆಲೆಯಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು ರೂಪಿಸಿದ್ದಾರೆ.. ಬಂದವರು ಪರಿಚಿತರಿರಬಹುದು ಎಂದು ನಾಗವೇಣಿ ಮನೆ ಬಾಗಿಲು ತೆಗೆದಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಕುಡಿಯಲು ನೀರು ಕೇಳಿದ್ದಾರೆ. ನಾಗವೇಣಿ ನೀರು ತರಲು ಅಡುಗೆ ಮನೆಗೆ ಹೋದಾಗ ಇಬ್ಬರು ಪುರುಷರಲ್ಲಿ ಒಬ್ಬ ಅಡುಗೆ ಮನೆಗೆ ಒಳಗೆ ನುಗ್ಗಿ... - [ಕಸ ಸುರಿದವರಿಗೆ ಸ್ಥಳದಲ್ಲೇ ಸನ್ಮಾನ!ಜಾಗೃತಿಗೆ ಹೊಸ ಮಾರ್ಗ ಕಂಡುಕೊಂಡ ಪುರಸಭೆ ಸಿಬ್ಬಂದಿ.](https://akshayatv.com/?p=1926): ಆನೇಕಲ್ : ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಕಸ ಸುರಿಯುವವರಿಗೆ ಪುರಸಭೆಯ ಸಿಬ್ಬಂದಿ ಹಾರ, ಶಾಲು ಹಾಕಿ ಸನ್ಮಾನಿಸುವ ಮೂಲಕ ರಸ್ತೆ ಬದಿಯಲ್ಲಿ ಕಸ ಸುರಿಯದಂತೆ ಮಂಗಳವಾರ ಜಾಗೃತಿ ಮೂಡಿಸಿದರು. ಕಸ ಸುರಿದವರಿಂದಲೇ ಕಸವನ್ನು ಎತ್ತಿಸುವ ಮೂಲಕ ರಸ್ತೆ ಬದಿಯಲ್ಲಿ ಕಸ ಸುರಿದಿದ್ದನ್ನು ಸ್ವಚ್ಛಗೊಳಿಸಿದರು. ಆನೇಕಲ್‌ ಪುರಸಭೆ ವ್ಯಾಪ್ತಿಯಲ್ಲಿ ಕಸದ ನಿರ್ವಹಣೆಯೇ ಬಹುದೊಡ್ಡ ಸವಾಲಾಗಿದೆ. ರಸ್ತೆ ಬದಿಗಳಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಪುರಸಭೆಯು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕಸ ವಿಂಗಡನೆಗಾಗಿ ಪ್ರಮುಖ ರಸ್ತೆಗಳಲ್ಲಿ ಕಬ್ಬಿಣದ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ. ಕಸ ಸುರಿಯಬಾರದು ಎಂಬ ಫಲಕಗಳನ್ನು ಹಾಕಲಾಗಿದೆ. ಆದರೂ ಸಹ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಕಸ ಹಾಕುತ್ತಿದ್ದರಿಂದ ಪುರಸಭೆಯ ಸಿಬ್ಬಂದಿಯು ರಸ್ತೆ ಬದಿಯಲ್ಲಿ ಕಸ ಸುರಿಯುವವರಿಗೆ ಸನ್ಮಾನ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಮುಂದಿನ ದಿನಗಳಲ್ಲಿ ಕಸ ಸುರಿಯುವವರ ಚಿತ್ರಗಳನ್ನು ಮಾಹಿತಿ ಫಲಕಗಳನ್ನಾಗಿ ಮಾಡಿ ಟೌನ್‌ ವ್ಯಾಪ್ತಿಯ ಪ್ರಮುಖ ವೃತ್ತಗಳಲ್ಲಿ ಹಾಕಲಾಗುವುದು ಎಂದು ಪುರಸಭೆಯ ಸಿಬ್ಬಂದಿ ತಿಳಿಸಿದರು. ಪುರಸಭಾ ಮುಖ್ಯಾಧಿಕಾರಿ ಎಚ್‌.ಎ.ಕುಮಾರ್‌ ಮಾತನಾಡಿ... - [ಮಾಯಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ನಾರಾಯಣಪ್ಪ ಅವಿರೋಧ ಆಯ್ಕೆ : ಪಕ್ಷಕ್ಕೆ ಮತ್ತೊಂದು ಗೆಲುವು](https://akshayatv.com/?p=1918): ಆನೇಕಲ್ : ತಾಲ್ಲೂಕಿನ ರಾಜಕೀಯ ವಲಯದಲ್ಲಿ ಗಮನ ಸೆಳೆದಿದ್ದ ಮಾಯಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಂಬಲಿತ ಅಭ್ಯರ್ಥಿ ನಾರಾಯಣಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಗೆಲುವು ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿಯ ಹಿಡಿತವನ್ನು ಮತ್ತಷ್ಟು ಬಲಪಡಿಸಿದೆ ಎಂದು ವಿಶ್ಲೇಷಿಸಲಾಗಿದೆ. ಕಣದಲ್ಲಿದ್ದ ಅಭ್ಯರ್ಥಿಗಳು ಮತ್ತು ಚುನಾವಣಾ ಪ್ರಕ್ರಿಯೆ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ತೀವ್ರ ಪೈಪೋಟಿ ಕಂಡುಬಂದಿತ್ತು. ಎರಡೂ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದು, ಪಂಚಾಯಿತಿ ಸದಸ್ಯರ ಮತವು ನಿರ್ಣಾಯಕವಾಗಿತ್ತು. ಚುನಾವಣಾ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಮತದಾನ ಪ್ರಕ್ರಿಯೆಯು ಯಾವುದೇ ಅಹಿತಕರ ಘಟನೆಗಳಿಲ್ಲದೆ ಸುಸೂತ್ರವಾಗಿ ನೆರವೇರಿತು. ಮತ ಎಣಿಕೆಯ ನಂತರ ನಾರಾಯಣಪ್ಪ ಅವರು ಹೆಚ್ಚಿನ ಸದಸ್ಯರ ಬೆಂಬಲ ಗಳಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ನಾರಾಯಣಪ್ಪ ಅವರ ಆಯ್ಕೆಯೊಂದಿಗೆ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಜಯಘೋಷ ಮೊಳಗಿಸಿ, ವಿಜಯೋತ್ಸವ ಆಚರಿಸಿದರು. ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ನಾರಾಯಣಪ್ಪ ಅವರಿಗೆ... - [ಕೆಪಿಸಿಸಿ ಶಿಕ್ಷಕರ ಘಟಕದ ನೂತನ ರಾಜ್ಯ ಉಪಾಧ್ಯಕ್ಷರಾದ ವಿಜಯಕುಮಾರ್ ಗೌಡರಿಗೆ ಅಭಿನಂದನೆ ಸಲ್ಲಿಕೆ](https://akshayatv.com/?p=1912): ಆನೇಕಲ್ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕದ ನೂತನ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ವಿಜಯಕುಮಾರ್ ಗೌಡ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಬುಧವಾರ (ಸೆಪ್ಟೆಂಬರ್ 17, 2025) ಆನೇಕಲ್ ನ ಚಂದಾಪುರ ಪುರಸಭೆ ವ್ಯಾಪ್ತಿಯ ಸೂರ್ಯ ಸಿಟಿ ಮೊದಲ ಹಂತದಲ್ಲಿರುವ ಶಾಸಕರ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಅಭಿನಂದನಾ ಸಮಾರಂಭ ನಡೆಯಿತು. ಕಾರ್ಯಕ್ರಮದ ವೇಳೆ ಸ್ಥಳೀಯ ಮುಖಂಡರುಗಳು ಬೃಹತ್ ಗಾತ್ರದ ಹೂವಿನ ಹಾರ ಹಾಕಿ, ಸಿಹಿ ಹಂಚಿ ವಿಜಯಕುಮಾರ್ ಗೌಡ ಅವರಿಗೆ ಶುಭ ಕೋರಿದರು. ಈ ಸನ್ಮಾನಕ್ಕೆ ವಿಜಯಕುಮಾರ್ ಗೌಡರು ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಅವರು ಆನೇಕಲ್ ಕ್ಷೇತ್ರದ ಶಾಸಕ ಬಿ.ಶಿವಣ್ಣ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನ ಜಿಲ್ಲಾ ಉಪಾಧ್ಯಕ್ಷ ರಾಚಮಾನಹಳ್ಳಿ ಮನೋಹರ್, ಯುವ ಕಾಂಗ್ರೆಸ್ ನ ಆನೇಕಲ್ ಬ್ಲಾಕ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂರ್ಯ ಜೈ ಭೀಮ್, ಮತ್ತು ಕಾಂಗ್ರೆಸ್ ಮುಖಂಡರಾದ... - [ಆನೇಕಲ್: ಆರೋಪಿಗಳನ್ನು ಬಂಧಿಸದಿದ್ದರೆ ಗೃಹ ಇಲಾಖೆಗೆ ಮುತ್ತಿಗೆ- ದಲಿತ ಮುಖಂಡ ಸಂದೇಶ್ ಎಚ್ಚರಿಕೆ.](https://akshayatv.com/?p=1908): ಆನೇಕಲ್ : ತಾಲ್ಲೂಕಿನ ಜಿಗಣಿ ಸಮೀಪವಿರುವ ನಿರ್ಮಾಣ್ ಶೆಲ್ಟರ್ಸ್ ಕಂಪನಿಯ ಮಾಲೀಕರಾದ ಲಕ್ಷ್ಮೀನಾರಾಯಣ್, ಶಶಿ ಪಾಟೀಲ್ ಮತ್ತು ನಿರ್ದೇಶಕಿ ಸುಷ್ಮಾ ಮೂರ್ತಿ ಅವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಗೃಹ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ದಲಿತ ಮುಖಂಡ ಸಂದೇಶ್ ಅವರು ಗಂಭೀರ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಆರೋಪ ಈ ಕುರಿತು ಆನೇಕಲ್ ತಾಲ್ಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಾಣ್ ಶೆಲ್ಟರ್ಸ್ ನ ಮಾಲೀಕರು, ನಿರ್ದೇಶಕರು ಹಾಗೂ ಕಾನೂನು ಸಲಹೆಗಾರರ ಮೇಲೆ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿ ಇಪ್ಪತ್ತೊಂದು ದಿನಗಳು ಕಳೆದಿವೆ. ಆದರೂ ಸಹ ಜಿಗಣಿ ಪೊಲೀಸರು ಆರೋಪಿಗಳನ್ನು ಬಂಧಿಸದೆ ಮೀನಮೇಷ ಎಣಿಸುತ್ತಿದ್ದಾರೆ. ಪೊಲೀಸರ ಈ ನಿರ್ಲಕ್ಷ್ಯದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಂದೇಶ್ ತಿಳಿಸಿದರು. ಪ್ರಕರಣದ ಹಿನ್ನೆಲೆ ಒಂದು ತಿಂಗಳ ಹಿಂದೆ ಕಂಪನಿಯ ಮಾಜಿ ಸಿಬ್ಬಂದಿಯೊಬ್ಬರು ಕಂಪನಿಯ ಮಾಲೀಕರ ಮೇಲೆ ಜಾತಿ ನಿಂದನೆ, ಥಳಿಸುವುದು ಮತ್ತು ಬಲವಂತವಾಗಿ ರಾಜೀನಾಮೆ ಪಡೆಯುವಂತಹ ಗಂಭೀರ ಆರೋಪಗಳನ್ನು... - [ಆನೇಕಲ್ ಕ್ರಿಕೆಟ್ ಕಣ: ಬಹುನಿರೀಕ್ಷಿತ ಎ.ಎಸ್.ಬಿ. ಚಾಂಪಿಯನ್ಸ್ ಟ್ರೋಫಿ-2025 ರಣಕಣಕ್ಕೆ ಸಜ್ಜು; ಸ್ಥಳೀಯ ಪ್ರತಿಭೆಗಳಿಗೆ ಬೃಹತ್ ವೇದಿಕೆ](https://akshayatv.com/?p=1905): ಆನೇಕಲ್ : ಕ್ರೀಡಾಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ‘ಆನೇಕಲ್ ಚಾಂಪಿಯನ್ಸ್ ಟ್ರೋಫಿ – 2025’ ಕ್ರಿಕೆಟ್ ಪಂದ್ಯಾವಳಿಗೆ ಎಲ್ಲಾ ಸಿದ್ಧತೆಗಳು ಅಂತಿಮಗೊಂಡಿವೆ. ಪ್ರಥಮ ಬಾರಿಗೆ ಆಯೋಜನೆಯಾಗುತ್ತಿರುವ ಈ ಟೂರ್ನಿಯು ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸಲಿದ್ದು, ಕ್ರಿಕೆಟ್ ಲೋಕದ ಭರವಸೆಯ ಯುವ ಆಟಗಾರರ ಕೌಶಲ್ಯ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ. ಈ ಭಾರಿ ತಾಲ್ಲೂಕ್ ಮಟ್ಟದ ಪಂದ್ಯಾವಳಿಯ ಜವಾಬ್ದಾರಿಯನ್ನು ಎ.ಎಸ್.ಬಿ. ಕ್ರೀಕೆಟರ್ಸ್ ತಂಡವು ಹೊತ್ತುಕೊಂಡಿದೆ. ಪಂದ್ಯಾವಳಿಯ ದಿನಾಂಕಗಳು ಈಗಾಗಲೇ ನಿಗದಿಯಾಗಿದ್ದು, ಸೆಪ್ಟೆಂಬರ್ ತಿಂಗಳಿನ ವಾರಾಂತ್ಯದ ದಿನಗಳಾದ ಸೆಪ್ಟೆಂಬರ್ 20, 21, 27 ಮತ್ತು 28 ರಂದು ಈ ಕ್ರೀಡಾ ಸಂಭ್ರಮ ನಡೆಯಲಿದೆ. ಪಂದ್ಯಾವಳಿಯ ಎಲ್ಲಾ ರಣರೋಚಕ ಪಂದ್ಯಗಳಿಗೆ ಅನೇಕಲ್ ನಲ್ಲಿರುವ ಎ.ಎಸ್.ಬಿ. ಆಟದ ಮೈದಾನ ಆತಿಥ್ಯ ವಹಿಸಲಿದೆ. ಕ್ರೀಡಾಂಗಣವು ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದ್ದು, ಟೂರ್ನಿ ಯಶಸ್ವಿಗೊಳಿಸಲು ಆಯೋಜಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಿಗೆ ಘೋಷಿಸಿರುವ ಬಹುಮಾನಗಳು ಯುವ ಕ್ರಿಕೆಟಿಗರ ಉತ್ಸಾಹವನ್ನು ಇಮ್ಮಡಿಗೊಳಿಸಿವೆ. ವಿಜೇತ ತಂಡಕ್ಕೆ ಬರೋಬ್ಬರಿ ₹30,000 ನಗದು ಬಹುಮಾನದೊಂದಿಗೆ ಆಕರ್ಷಕ... - [ಐಐಎಚ್‌ಎಮ್‌ಆರ್ ಕಾಲೇಜಿನಲ್ಲಿ 14ನೇ ಘಟಿಕೋತ್ಸವ](https://akshayatv.com/?p=1884): ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪವಿರುವ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆ (ಐಐಎಚ್‌ಎಮ್‌ಆರ್) ಆಸ್ಪತ್ರೆ ನಿರ್ವಹಣೆ, ಆರೋಗ್ಯ, ಐಟಿ, ಔಷಧ ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ದೂರದೃಷ್ಟಿಯ ನಾಯಕರನ್ನು ರೂಪಿಸುವಲ್ಲಿ ಸಂಸ್ಥೆಯು ನಿರಂತರ ಬದ್ಧತೆಯನ್ನು ಒಳಗೊಂಡಿದೆ ಎಂದು ಐಐಎಚ್‌ಎಂಆರ್‌ನ ಬೆಂಗಳೂರು ನಿರ್ದೇಶಕಿ ಡಾ.ಉಷಾ ಮಂಜುನಾಥ್ ತಿಳಿಸಿದರು. ಐಐಎಚ್‌ಎಂಆರ್‌ನ ೧ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಘಟಿಕೋತ್ಸವವು ಕೇವಲ ಶೈಕ್ಷಣಿಕ ಪ್ರಯತ್ನದ ಪರಾಕಷ್ಟೆಯನ್ನು ಸೂಚಿಸುವುದಿಲ್ಲ. ಬದಲಿಗೆ ಸಾಮರ್ಥ್ಯವುಳ್ಳ, ನೈತಿಕ ಮತ್ತು ಆವಿಷ್ಕಾರೀ ಚಿಂತನೆಯುವಳ್ಳ ನಾಯಕರನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದರು. ಐಐಎಚ್‌ಎಮ್‌ಆರ್ ಸಂಸ್ಥೆಯ ವಿದ್ಯಾರ್ಥಿಗಳು ಜಾಗತಿಕ ಆರೋಗ್ಯ ವ್ಯವಸ್ಥೆಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವುದನ್ನು ಕಾಣಲು ನಾವು ಉತ್ಸುಕರಾಗಿದ್ದೇವೆ. ನಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಉದ್ಯಮದ ನಾಯಕರು ಸದಾ ಬೆನ್ನೆಲುಬಾಗಿರುತ್ತಾರೆ ಎಂದು ಅವರು ಹೇಳಿದರು. ವೈದ್ಯರಿಗಾಗಿ ಮೊದಲ ಬಾರಿ ಎ1 ತರಬೇತಿ ಕಾರ್ಯಕ್ರಮದ ಆರಂಭಿದ್ದೇವೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ವೈದ್ಯರಲ್ಲಿ ನಿರ್ಣಾಯಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಇವೆಲ್ಲಾ ಆವಿಷ್ಕಾರಗಳಿಂದ ಆರೋಗ್ಯ ಕ್ಷೇತ್ರದಲ್ಲಿ... - [ಬಳ್ಳೂರು ಗ್ರಾಮದಲ್ಲಿ ಸರ್ಕಾರಿ ಓಣಿ ಜಾಗ ಸರ್ವೆ ಮಾಡುವ ವೇಳೆ ಅಧಿಕಾರಿಗಳು ಹಾಗೂ ಒತ್ತುವರಿದಾರರ ನಡುವೆ ಮಾತಿನ ಚಕಮಕಿ](https://akshayatv.com/?p=1876): ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಸರ್ಕಾರಿ ಓಣಿ ಜಾಗ ಸರ್ವೆ ಮಾಡುವ ವೇಳೆ ಒತ್ತುವರಿದಾರರು ಹಾಗೂ ಕಂದಾಯ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಬಳ್ಳೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಸರ್ಕಾರಿ ಓಣಿ ಜಾಗವನ್ನ ಕೆಲವರು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದರು. ಗ್ರಾಮ ಪಂಚಾಯಿತಿ ಅಧಿಕಾರಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಅತ್ತಿಬೆಲೆಯ ಉಪ ತಹಶೀಲ್ದಾರ್ ನವೀನ್ ನೇತೃತ್ವದಲ್ಲಿ ಇಂದು ಸರ್ಕಾರಿ ಸರ್ವೆ ಕಾರ್ಯ ನಡೆಸಲಾಗುತ್ತಿತ್ತು ಆದರೆ ಸರ್ವೆ ಮಾಡುವ ಸಮಯದಲ್ಲಿ ಅಧಿಕಾರಿಗಳು ಹಾಗೂ ಒತ್ತುವರಿದಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಒತ್ತಡದ ನಡುವೆಯೂ ಕಂದಾಯ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ಒತ್ತುವರಿಯಾಗಿರುವ ಜಾಗವನ್ನು ಮಾರ್ಕಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ನಡುವೆ ಸರ್ವೇ ನಂಬರ್ 136 ರಲ್ಲಿ 35 ಗುಂಟೆ ಸರ್ಕಾರಿ ಗುಂಡು ತೋಪು ಜಾಗ ಒತ್ತುವರಿ ತೆರವು ಮಾಡಿ ಸರ್ಕಾರದ ವಶಕ್ಕೆ ಪಡೆಯಲಾಯಿತು. ಜೊತೆಗೆ 3.19... - [ಬಗರ್ ಹುಕುಂ ಸಾಗುವಳಿ ರೈತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ](https://akshayatv.com/?p=1873): ಆನೇಕಲ್ ತಾಲೂಕಿನ ಇಂಡ್ಲವಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಮಂಡಳಿಯ ಸೂರ್ಯ ಸಿಟಿ ನಾಲ್ಕನೇ ಹಂತದಲ್ಲಿ ಬಗರ್ ಹುಕುಂ ಸಾಗುವಳಿ ಮಾಡುವ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಬಗರ್ ಹುಕುಂ ಸಾಗುವಳಿ ರೈತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು ಇಂಡ್ಲವಾಡಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ ರೈತ ಸಂಘದ ಕಾರ್ಯಕರ್ತರು ಹಾಗೂ ಸ್ಥಳೀಯರು ಕರ್ನಾಟಕ ಗೃಹ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ರೈತ ಮುಖಂಡ ಶಿವರಾಮ ರೆಡ್ಡಿ ಇಂಡ್ಲವಾಡಿ ಸುತ್ತಮುತ್ತ 2 ಸಾವಿರ ಎಕರೆ ಪ್ರದೇಶದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಸೂರ್ಯ ಸಿಟಿ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಕರ್ನಾಟಕ ಗೃಹ ಮಂಡಳಿ ಬಗರ್ ಹುಕುಂ ಸಾಗುವಳಿದಾರರಿಗೆ ಯಾವುದೇ ಪರಿಹಾರ ನೀಡದೇ ಅನ್ಯಾಯ ಮಾಡುತ್ತಿದೆ. ಇದರಿಂದ ನೂರಾರು‌ ರೈತರು ತಮ್ಮ ಜಮೀನುಗಳನ್ನು ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು ಹಾಗೂ ವಸತಿ ಸಚಿವರು ಇಲ್ಲಿನ ಸ್ಥಳೀಯ... - [ಬಮೂಲ್ ನೂತನ ನಿರ್ದೇಶಕರಾಗಿ ಆರ್ ಕೆ ರಮೇಶ್ ಆಯ್ಕೆ](https://akshayatv.com/?p=1867): ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಆನೇಕಲ್ ಕಚೇರಿಯಲ್ಲಿ ಬಮೂಲ್ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಆರ್ ಕೆ ರಮೇಶ್ ರವರಿಗೆ ಬಮೂಲ್ ಅಧಿಕಾರಿಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಡಿಕೆ ಸುರೇಶ್ ರವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅದರಂತೆ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಬಮೂಲ್ ನೂತನ ನಿರ್ದೇಶಕರಾಗಿ ಆರ್ ಕೆ ರಮೇಶ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಿರ್ದೇಶಕರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಆನೇಕಲ್ ಬಮುಲ್ ಕಚೇರಿಗೆ ಆಗಮಿಸಿದ ಆರ್‌ಕೆ ರಮೇಶ್ ರವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ವೇಳೆ ಮಾತನಾಡಿದ ಬಮೂಲ್ ನೂತನ ನಿರ್ದೇಶಕರಾದ ಅರ್.ಕೆ ರಮೇಶ್ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಹಾಲು ಉತ್ಪಾದಕರು ಹಾಗೂ ಸಹಕಾರ ಸಂಘದ ಪದಾಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು. ನಾನು ಈ ಹಿಂದೆ ಬಮೂಲ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಹಾಲು... - [ಬಳ್ಳೂರು ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ವಸಂತ್ ಆಯ್ಕೆ](https://akshayatv.com/?p=1864): ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ವಸಂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಬಳ್ಳೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸರ್ವ ಸದಸ್ಯರು ವಸಂತ್ ರವರನ್ನ ನೂತನ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದರು. ನೂತನ ಉಪಾಧ್ಯಕ್ಷರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮನೋದೇವಿ ಗಣೇಶ್ ಸೇರಿದಂತೆ ಪಂಚಾಯಿತಿ ಸದಸ್ಯರು ಸಿಹಿ ತಿನಿಸಿ ಅಭಿನಂದನೆ ಸಲ್ಲಿಸಿದರು ಇದೆ ವೇಳೆ ಮಾತನಾಡಿದ ನೂತನ ಉಪಾಧ್ಯಕ್ಷರಾದ ಬಳ್ಳೂರು ವಸಂತ್ ನನ್ನ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದು ಅವುಗಳ ಬಗ್ಗೆ ಗಮನಹರಿಸಿ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು. ಗ್ರೇಟರ್ ಬೆಂಗಳೂರು ಬಗ್ಗೆ ವಿರೋಧ ವ್ಯಕ್ತಪಡಿಸಿದ ಅವರು ಗ್ರಾಮ ಪಂಚಾಯಿತಿಗಳನ್ನು ಏಕಾಏಕಿ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ತಂದರೆ ಬೆಳವಣಿಗೆ ಕುಂಠಿತವಾಗುತ್ತದೆ. ಜೊತೆಗೆ ಸ್ಥಳೀಯ ಯುವಕರು ಚುನಾವಣೆಗೆ ಸ್ಪರ್ಧೆ ಮಾಡಲು ಕಷ್ಟವಾಗುತ್ತದೆ ಈ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಬಗ್ಗೆ ವೈಯಕ್ತಿಕವಾಗಿ... - [ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆ ಆಯೋಜನೆ](https://akshayatv.com/?p=1861): ಆನೇಕಲ್ ತಾಲ್ಲೂಕಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿಯ 2015-26ನೇ ಸಾಲಿನ ಮೊದಲನೆ ಸುತ್ತಿನ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಇನ್ನು ಮೊದಲನೆ ಸುತ್ತಿನ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಮುನಿಕೃಷ್ಣರವರು ವಹಿಸಿದ್ದರು. ಇನ್ನು ಗ್ರಾಮಸಭೆಯಲ್ಲಿ ಇಲಾಖೆ ಅದಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು ಹಾಗೆಯೇ ಸಾರ್ವಜನಿಕರು ಸಹ ತಮ್ಮ ತಮ್ಮ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಮತ್ತು ಇಲಾಖೆ ಅದಿಕಾರಿಗಳ ಮುಂದೆ ಹೇಳಿಕೊಂಡ ದೃಶ್ಯ ಕಂಡು ಬಂತು. ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೋತ್ಸಾಹ ಧನದ ಚೆಕ್ ವಿತರಣೆ ಮಾಡಲಾಯಿತು. ಇನ್ನು ಈ ವೇಳೆ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ. ಮುನಿಕೃಷ್ಣರವರು ಮಾತನಾಡಿ ಗ್ರಾಮಸಭೆಯಲ್ಲಿ ಸಾರ್ವಜನಿಕರು ತಿಳಿಸಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು. ಇನ್ನು ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಸರ್ವತೋಮುಖ ಅಭಿವೃದ್ದಿಗೆ ಈಗಾಗಲೇ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಮುಂದಿನ ದಿನಗಳಲ್ಲಿ ಮತ್ತಷ್ಠು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು... - [ಹಾರಗದ್ದೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ](https://akshayatv.com/?p=1858): ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾರಗದ್ದೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಶಾಸಕರಾದ ಎಂ ಕೃಷ್ಣಪ್ಪ ಹಾಗೂ ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ ಇಂದು ಉದ್ಘಾಟನೆ ಮಾಡಿದರು. ಹಾರಗದ್ದೆ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಹಾರಗದ್ದೆಯ ಮೈಲ್ ಸ್ಟೋನ್ ಬಡಾವಣೆಯಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಗ್ರಾಮ ಪಂಚಾಯಿತಿಯ ಕಟ್ಟಡವನ್ನು ನಿರ್ಮಿಸಿ ಇಂದು ಲೋಕಾರ್ಪಣೆ ಮಾಡಲಾಯಿತು ಈ ಕುರಿತು ಮಾತನಾಡಿದ ಶಾಸಕ ಕೃಷ್ಣಪ್ಪ ರಸ್ತೆ ಅಗಲೀಕರಣ ಸಮಯದಲ್ಲಿ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡ ಜಾಗವನ್ನ ಬಳಸಿಕೊಂಡು ಗ್ರಾಮ ಪಂಚಾಯಿತಿ ಕಟ್ಟಡ ತುಂಬಾ ಚಿಕ್ಕದಾಗಿತ್ತು. ಸಭೆ ಸಮಾರಂಭ ನಡೆಸಲು ಸಭಾಂಗಣದ ಕೊರತೆ ಇದ್ದ ಹಿನ್ನೆಲೆಯಲ್ಲಿ ಅತ್ಯಾಧುನಿಕವಾಗಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿ ಇಂದು ಉದ್ಘಾಟನೆ ಮಾಡಲಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ, ಆನೇಕಲ್ ಶಾಸಕ ಶಿವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಾ ರಾಮಸ್ವಾಮಿ, ಉಪಾಧ್ಯಕ್ಷರಾದ ಇಂದಿರಾ ಶಿವಕುಮಾರ್, ಪಂಚಾಯತಿ ಸದಸ್ಯರು ಮತ್ತು ಹಿರಿಯ ಮುಖಂಡರಾದ... - [ಕೊಡತಿ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ](https://akshayatv.com/?p=1853): ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಡತಿಗ್ರಾಮ ಪಂಚಾಯಿತಿ ಅನುದಾನಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯತಿ ಕಟ್ಟಡವನ್ನು ಪಕ್ಷ ಭೇದವಿಲ್ಲದೆ ಎಲ್ಲಾ ಸದಸ್ಯರೊಂದಿಗೆ ಗ್ರಾಮ ಪಂಚಾಯಿತಿ ಪ್ರಬಾರ ಅಧ್ಯಕ್ಷ ಮಂಜುನಾಥ್, ಉದ್ಘಾಟಿಸಿದರು. ಸರ್ಜಾಪುರ ಮುಖ್ಯ ರಸ್ತೆ ವಿಪ್ರೋ ಸಮೀಪ ಸರ್ಕಾರಿ ಜಾಗವನ್ನು ಒತ್ತುವರಿದಾರರಿಂದ ತೆರವುಗೊಳಿಸಿಗ್ರಾಮ ಪಂಚಾಯತಿಯ‌ 2 ಕೋಟಿ ಅನುದಾನದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಗ್ರಾ.ಪಂ ಪ್ರಭಾರ ಅಧ್ಯಕ್ಷ ಮಂಜುನಾಥ್ ತಿಳಿಸಿದರು. ಎರಡು ಎಕರೆಯ ಜಾಗದಲ್ಲಿ ಐದು ಸಾವಿರ ಚದರ ಅಡಿಯ ಎರಡು ಮಹಡಿ ವಿಂಗಡಣೆ ಮಾಡಿ ಸುಸುಶ್ಚಿತವಾದ ಕಟ್ಟಡ ನಿರ್ಮಾಣ ಮಾಡಿ ಹೈಟೆಕ್ ಪಂಚಾಯಿತಿ ನಿರ್ಮಿಸಿ ಸಾರ್ವಜನಿಕರಿಗೆ ಮುಕ್ತವಾಗಿ ವ್ಯವಹರಿಸಲು ಎಲ್ಲಾ ಪಂಚಾಯಿತಿ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಕೈಜೋಡಿಸಿ ನಿರ್ಮಿಸಿದ್ದಾರೆ. ಪಂಚಾಯಿತಿಯಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗಳುಗೆ ತಲ ಒಬ್ಬರಿಗೆ 25 ಕೆಜಿ ಅಕ್ಕಿ ಮೂಟೆಯನ್ನು ಕೊಡಲಾಗಿದ್ದು ಗಂಡಸರುಗೆ ಒಂದು ಜೊತೆ ಪ್ಯಾಂಟ್ ಶರ್ಟ್ ಹೆಂಗಸರು ಸೀರೆ ಹಾಗೂ ಎಲ್ಲಾ ಸಿಬ್ಬಂದಿಗೆ ಶಾಲು ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು... - [ಬಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನೂತನ ಅಧ್ಯಕ್ಷರಾಗಿ ಮನೋದೇವಿ ಗಣೇಶ್ ಆಯ್ಕೆ](https://akshayatv.com/?p=1850): ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ತೆರವಾದ ಅಂಗವಾಗಿಶುಕ್ರವಾರ ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಮನೋದೇವಿ ಗಣೇಶ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಲಾಯಿತು. ನೂತನ ಅಧ್ಯಕ್ಷರಾದ ಮನೋದೇವಿ ಗಣೇಶ್ ಮಾತನಾಡಿ ಎಲ್ಲಾ ಸದಸ್ಯರ ಸಹಕಾರದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಹಾಗಾಗಿ ಅವರ ನಂಬಿಕೆಗೆ ಚುತ್ತಿ ಬರದಂತೆ ನಡೆದು ಎಲ್ಲಾ ಸದಸ್ಯರನ್ನು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೇಗಿದುಕೊಂಡು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದರು.ಇನ್ನು ಆಯ್ಕೆಗೆ ಸಹಕಾರಿಸಿದ ಎಲ್ಲಾ ಮುಖಂಡರಿಗೆ ಮತ್ತು ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಲಾಗುವುದು ಎಂದು ತಿಳಿಸಿದರು.ಇನ್ನು ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಮನೋದೇವಿ ಅವರನ್ನು ಗ್ರಾಮ ಪಂ. ಸದಸ್ಯರಾದ ಸುಪ್ರೀತ ಮುನಿರೆಡ್ಡಿ, ಶಿಲ್ಪ ಭಾಸ್ಕರ್, ಆಶೋಕ್ ರೆಡ್ಡಿ, ಕೇಬಲ್ ಮಂಜುನಾಥ್, ವಸಂತ್ ರೆಡ್ಡಿ, ಲತಾ ಗಣೇಶ್, ರೂಪವತಿ, ವೆಂಕಟೇಶ್, ಲಕ್ಷ್ಮಮ್ಮ, ನಾಗಣ್ಣ, ಮಂಜುನಾಥ್,ಮಧುಕುಮಾರ್, ಗಂಗಮ್ಮ,... - [ಹೆಬ್ಬಗೋಡಿಯಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ](https://akshayatv.com/?p=1847): ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ನೂತನ ಇಂದಿರಾ ಕ್ಯಾಂಟಿನ್ ಇಂದು ಲೋಕಾರ್ಪಣೆ ಮಾಡಲಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಶಾಸಕ ಬಿ. ಶಿವಣ್ಣ ರವರ ನೇತೃತ್ವದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಮಾಡಲಾಯಿತು. ಈ ಕುರಿತು ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೆಬ್ಬಗೋಡಿ ಸುತ್ತಮುತ್ತ ಸಾವಿರಾರು ಮಂದಿ‌ ಕಾರ್ಮಿಕರು ವಾಸ ಮಾಡುತ್ತಿದ್ದಾರೆ‌. ಕಡಿಮೆ ದರದಲ್ಲಿ ಕಾರ್ಮಿಕರಿಗೆ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಈ ಭಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಲಾಗಿದೆ. ಮುಂದೆ ಇಂದಿರಾ ಕ್ಯಾಂಟಿನ್ ನಲ್ಲಿ ಸಾವಿರಾರು ಜನ ಕಾರ್ಮಿಕರು ತಮ್ಮ ಹೊಟ್ಟೆ ತುಂಬಿಸುವ ಕೆಲಸ ಮಾಡಲಿದೆ ಎಂದರು. ಬಳಿಕ ಮಾತನಾಡಿದ ಶಾಸಕ ಶಿವಣ್ಣ ಆನೇಕಲ್ ಟೌನ್, ಅತ್ತಿಬೆಲೆ , ಬೊಮ್ಮಸಂದ್ರ ಹಾಗೂ ಹೆಬ್ಬಗೋಡಿಯಲ್ಲಿ ಬಡವರ ಅನುಕೂಲಕ್ಕಾಗಿ ಸರ್ಕಾರದಿಂದ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಲಾಗಿದೆ‌. ಪ್ರತಿ ದಿನ ಕೆವಲ 25 ರೂ ಗಳಿಗೆ ಸಾವಿರಾರು ಮಂದಿ ಮೂರು ಹೊತ್ತಿನ ಊಟವನ್ನ ಇಂದಿರಾ ಕ್ಯಾಂಟಿನ್ ನಲ್ಲಿ ಸವಿಯುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಇಂದಿರಾ ಕ್ಯಾಂಟಿನ್ ಗೆ ಪ್ರತಿದಿನ... - [ವಿದ್ಯುತ್ ಶಾಕ್, ಬಾಲಕಿ ಸಾವು](https://akshayatv.com/?p=1844): ಆನೇಕಲ್ ತಾಲ್ಲೂಕಿನ ನಾರಾಯಣಘಟ್ಟದಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕಿ ವಿದ್ಯುತ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ನಡೆದಿದೆ. ಮೃತ ಬಾಲಕಿಯನ್ನು ನಾರಾಯಣಘಟ್ಟ ಗ್ರಾಮದ ತನಿಷ್ಕಾ(11) ಎಂದು ಗುರುತಿಸಲಾಗಿದೆ ಶಾಲೆಗೆ ರಜೆ ಇದ್ದ ಕಾರಣ ಮನೆ ಬಳಿಯೇ ಆಟವಾಡುತ್ತಿದ್ದಳು, ವಿದ್ಯುತ್‌ ಕಂಬದ ಬಳಿ ಆಟವಾಡುತ್ತಿದ್ದಾಗ ಕರೆಂಟ್ ತಗುಲಿದೆ. ವಿದ್ಯುತ್ ಶಾಕ್‌ನಿಂದ ಗಾಯಗೊಂಡಿದ್ದ ತನಿಷ್ಕಾಳನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೇ ಬಾಲಕಿ ಸಾವನ್ನಪ್ಪಿದ್ದಾಳೆ. ಬೆಸ್ಕಾಂ ನಿರ್ಲಕ್ಷದಿಂದ ಬಾಲಕಿ ಸಾವನ್ನಪ್ಪಿರುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು, ಜೊತೆಗೆ ಬಾಲಕಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು - [ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜೀಬ್ರಾ ಸಾವು](https://akshayatv.com/?p=1841): ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಾವ್ಯ ಹೆಸರಿನ ಹೆಣ್ಣು ಜಿಬ್ರಾ ಇಂದು ಸಾವನ್ನಪ್ಪಿದೆ. ಜೈವಿಕ ಉದ್ಯಾನವನದ ಪಂಜರದಲ್ಲಿ ಚೈನ್ ಲಿಂಕ್ ಜಾಲಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜೀಬ್ರಾ ಸಾವನ್ನಪ್ಪಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಗಂಡು ಜಿಬ್ರಾಗಳ ಆಂತರಿಕ ಕದನ ಹಾಗೂ ಕಾಡಿನ ನರಭಕ್ಷಕ ಪ್ರಾಣಿಗಳ ಪ್ರವೇಶದಿಂದ ಒತ್ತಡ ಉಂಟಾಗಿ ಹೆಣ್ಣು ಜಿಬ್ರಾ ಚೈನ್ ಲಿಂಕ್ ಜಾಲಕ್ಕೆ ಡಿಕ್ಕಿ ಹೊಡೆದು ಜಿಬ್ರಾ ಮೃತಪಟ್ಟಿರುವುದಾಗಿ ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾವ್ಯ ಹೆಸರಿನ ಹೆಣ್ಣು ಜೀಬ್ರಾ ಗರ್ಭಿಣಿಯಾಗಿದ್ದು ಕೆಲವೇ ತಿಂಗಳಲ್ಲಿ ಮರಿ ಹಾಕುವ ನಿರೀಕ್ಷೆ ಇತ್ತು. ಆದರೆ ಇಂದು ನಡೆದ ಘಟನೆಯಿಂದ ಕಾವ್ಯ ಸಾವನ್ನಪ್ಪಿದ್ದು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಬುಕ್ಕಸಾಗರ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ](https://akshayatv.com/?p=1837): ಬೆಂ.ದಕ್ಷಿಣ ವ್ಯಾಪ್ತಿಯ ಬುಕ್ಕಸಾಗರ ಗ್ರಾಮದಲ್ಲಿ ಹೊಬಳಿ ಮಟ್ಟದಲ್ಲಿ ಬುಕ್ಕಸಾಗರ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಸ್ಥಳೀಯ ಮಟ್ಟದಲ್ಲಿ ಕ್ರಿಕೆಟ್ ಆಡುವ ಯುವಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಟೈರ್ ಬಾಬು , ಬುಕ್ಕಸಾಗರ ಮಂಜಣ್ಣ ಹಾಗೂ ಬಿಬಿಆರ್ ಬಾಬು ರವರ ನೇತೃತ್ವದಲ್ಲಿ ಅದ್ದೂರಿಯಾಗಿ ಪಂದ್ಯಾವಳಿ ನಡೆಸಲಾಯಿತು ಜಿಗಣಿ ಹೊಬಳಿ ಮಟ್ಟದಲ್ಲಿ ಆಯೋಜನೆ ಮಾಡಿದ್ದ ಪಂದ್ಯಾವಳಿಯಲ್ಲಿ ವಿವಿಧ ಭಾಗಗಳಿಂದ 14 ತಂಡಗಳು ಭಾಗವಹಿಸಿ ಅಂತಿಮ ಪ್ರಶಸ್ತಿ ಸುತ್ತಿಗಾಗಿ ಸೆಣೆಸಾಟ ನಡೆಸಿದವು. ಅಂತಿಮವಾಗಿ ಫೈನಲ್ ನಲ್ಲಿ ಹಾರಗದ್ದೆಯ ವಿನಾಯಕ ಕ್ರಿಕೆಟರ್ಸ್ ಹಾಗೂ ಹುಲ್ಲಹಳ್ಳಿ ಕ್ರಿಕೆಟರ್ಸ್ ನಡುವೆ ಫೈನಲ್ ಪಂದ್ಯ‌ ನಡೆಸಲಾಯಿತು. ಪಂದ್ಯದಲ್ಲಿ ಹಾರಗದ್ದೆಯ ವಿನಾಯಕ ಕ್ರಿಕೆಟರ್ಸ್ ಗೆಲುವು ಸಾಧಿಸುವ ಮೂಲಕ ಮೊದಲ ಬಹುಮಾನವನ್ನು ಪಡೆದರೆ, ಎರಡನೇ ಬಹುಮಾನವನ್ನು ಹುಲ್ಲಹಳ್ಳಿ ಕ್ರಿಕೆಟರ್ಸ್ ತಂಡ ತಮ್ಮದಾಗಿಸಿಕೊಂಡಿತು. ಮೂರನೇ ಬಹುಮಾನವನ್ನ ಹುಲಿಮಂಗಲದ ಅಭಿಮನ್ಯು ಕ್ರಿಕೆಟರ್ಸ್ ತಂಡ ಪಡೆದುಕೊಂಡಿತು. ಮೊದಲನೇ ಬಹುಮಾನವಾಗಿ 1 ಲಕ್ಷ 20 ಸಾವಿರ ನಗದು ಹಾಗೂ ಟ್ರೋಫಿ ವಿತರಣೆ ಮಾಡಲಾಯಿತು, ಎರಡನೇ ಬಹುಮಾನವಾಗಿ 50... - [ಆನೇಕಲ್ ಗುರುಭವನದಲ್ಲಿ ರಾಜ ಲಾಂಛನ ಸಂಸ್ಥೆ ವತಿಯಿಂದ ಶಿಕ್ಷಕರಿಗೆ ಗೌರವ ಪೂರ್ವಕ ಅಭಿನಂದನೆ ಸಲ್ಲಿಕೆ](https://akshayatv.com/?p=1831): ಆನೇಕಲ್ ಪಟ್ಟಣದಲ್ಲಿರುವ ಗುರು ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ರಾಜ ಲಾಂಛನ ಸಂಸ್ಥೆ ವತಿಯಿಂದ ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು. ಕಳೆದ ಐದಾರು ವರ್ಷಗಳಿಂದ ರಾಜ ಲಾಂಛನ ಸಂಸ್ಥೆಯು ಎಸ್ ಎಸ್.ಎಲ್. ಸಿ. ಪರೀಕ್ಷೆ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬುವಂತಹ ಕೆಲಸವನ್ನು ಮಾಡುತ್ತಿದೆ , ಈ ವರ್ಷವೂ ಸಹ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಜಲಾಂಛನ ಸಂಸ್ಥೆಯುಪೂರಕ ಪರೀಕ್ಷೆಗೆ ಸಿದ್ದತಾ ಶಿಬಿರವನ್ನು ಅಯೋಜಿಸಿ ಸುಮಾರು 20 ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆಗಳ ಕಾಲ ನುರಿತ ಶಿಕ್ಷಕರಿಂದ ಎಸ್.ಎಸ್. ಎಲ್ ಸಿ ಪರೀಕ್ಷೆಗೆ ಸಂಬಂದಿಸಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಬೋದನೆ ಮಾಡಲಾಯಿತು. ಪರೀಕ್ಷೆಯನ್ನು ವಿದ್ಯಾರ್ಥಿಗಳು ದಿಟ್ಟವಾಗಿ ಪರೀಕ್ಷೆ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಆಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಳ್ಳಲಾಯಿತು ಮಕ್ಕಳಿಗೆ ಪರೀಕ್ಷಾಪೂರ್ವ ಶಿಬಿರ ನಡೆಸಲು ಕಾರಣೀಭೂತರಾದ ಶಿಕ್ಷಕರಿಗೆ ಇಂದು ಆನೇಕಲ್ ಪಟ್ಟಣದಲ್ಲಿರುವ ಗುರು... - [ಲಿಟಲ್ ಸನ್ ಶೈನ್ ಇಂಟರ್ನ್ಯಾಷನಲ್ ಪ್ರಿ ಸ್ಕೂಲ್ ವತಿಯಿಂದ ವಿದ್ಯಾರಂಭ ಕಾರ್ಯಕ್ರಮ](https://akshayatv.com/?p=1828): ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪವಿರುವ ಅತ್ತಿಬೆಲೆ ಪಬ್ಲಿಕ್ ಶಾಲೆಯ ಆವರಣದಲ್ಲಿ ಲಿಟಲ್ ಸನ್ ಶೈನ್ ಇಂಟರ್ ನ್ಯಾಷನಲ್ ಪ್ರಿ ಸ್ಕೂಲ್ ವತಿಯಿಂದ ವಿದ್ಯಾರಂಭ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ಪ್ರಿ ಸ್ಕೂಲ್ ನಲ್ಲಿ ದಾಖಲಾದ ಮಕ್ಕಳು ತಮ್ಮ ಪೋಷಕರ ಜೊತೆ ಶಾಸ್ತ್ರೋಕ್ತವಾಗಿ ಅಕ್ಷರಭ್ಯಾಸ ಮಾಡುವ ಮೂಲಕ ವಿದ್ಯಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಈ ಕುರಿತು ಮಾತನಾಡಿದ ಎಪಿಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಮುನಿರಾಜು ಹಿಂದೂ ಧರ್ಮದಲ್ಲಿ ಮಕ್ಕಳು ಶಾಲೆಗೆ ಸೇರುವ ಮುನ್ನ ಅಕ್ಷರಭ್ಯಾಸ ಮಾಡಿಸುವ ಸಂಪ್ರದಾಯ ನೂರಾರು ವರ್ಷಗಳಿಂದ ರೂಢಿಯಲ್ಲಿದೆ. ದೇವಾಲಯ ಹಾಗೂ ಗುರುಗಳ ಸನ್ನಿಧಾನದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರೆ ಮಕ್ಕಳು ಕಲಿಕೆಯಲ್ಲಿ ಯಶಸ್ಸು ಸಾಧಿಸುತ್ತಾರೆ ಎಂಬ ನಂಬಿಕೆ ಪೊಷಕರಲ್ಲಿದೆ. ಆದರೆ ಇಂದು ನಮ್ಮ ಶಾಲೆಯಲ್ಲೇ ಸರಸ್ವತಿ ಪೂಜೆ ಮಾಡಿ ಶ್ರೀ ಲಕ್ಷ್ಮಿ ನಾರಾಯಣ ಆಚಾರ್ಯರ ಸಮ್ಮುಖದಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲಾಗಿದೆ. ಮಕ್ಕಳು ಮುಂದೆ ಕಲಿಕೆಯಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ.. ಎಂದು ಹಾರೈಸಿದರು. ಮಕ್ಕಳಿಗೆ ವಿದ್ಯಾರಂಭ ಮಾಡಿ ಅಕ್ಷರ ಅಭ್ಯಾಸ ಕಾರ್ಯಕ್ರಮ... - [ಕೆ ಪಿ ರಾಜು ರವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳಿಂದ ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆ](https://akshayatv.com/?p=1825): ಜನರಿಂದ ಜನರಿಗಾಗಿ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಯುವ ನಾಯಕರಾದ ಕೆ.ಪಿ.ರಾಜು ರವರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಯುವ ನಾಯಕರಾದ ಕೆ.ಪಿ.ರಾಜು ರವರ ಹುಟ್ಟು ಹಬ್ಬ ಅಂಗವಾಗಿ ಬ್ಯಾಗಡದೇನಹಳ್ಳಿ ಗ್ರಾಮದ ಬಳಿಯಿರುವ ಆಶ್ರಮ ವೃದ್ದಾಶ್ರಮದಲ್ಲಿ ವೃದ್ದರಿಗೆ ಬಟ್ಟೆ ವಿತರಣೆ , ಮತ್ತು ಸಿಪಾನಿ ಸೇವಾ ಸದನದಲ್ಲಿ ಹಾಗೂ ಹೆಬ್ಬಗೋಡಿ ವೃತ್ತದಲ್ಲಿ ಅನ್ನದಾಸೋಹ ಮಾಡಲಾಯಿತು, ಸರ್ಕಾರಿ ಶಾಲೆ ಮಕ್ಕಳಿಗೆ ಕಲಿಕೆಯ ಪರಿಕರಗಳು, ಬ್ಯಾಗ್ ವಿತರಣೆ ಸೇರಿದಂತೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಕೆ.ಪಿ.ರಾಜಣ್ಣ ಅಭಿಮಾನಿ ಬಳಗವು ಆಯೋಜಿಸುವ ಮೂಲಕ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇನ್ನು ತಾಲ್ಲೂಕಿನ ನೂರಾರು ಅಭಿಮಾನಿಗಳು ಕೆ.ಪಿ.ರಾಜು ಅವರಿಗೆ ಹುಟ್ಟು ಹಬ್ಬದ ಅಂಗವಾಗಿ ಅವರನ್ನು ಸನ್ಮಾನಿಸಿ ಅಭಿನಂಧಿಸಿ ಶುಭ ಹಾರೈಸಿದರು, ಇದೇ ಸಂದರ್ಭದಲ್ಲಿ ಜನರಿಂದ ಜನರಿಗಾಗಿ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಯುವ ನಾಯಕರಾದ ಕೆ.ಪಿ.ರಾಜು ಮಾತನಾಡಿ ನನ್ನ ಹುಟ್ಟು ಹಬ್ಬದ ಅಂಗವಾಗಿ... - [ಬೇಗೂರು ಪೊಲೀಸರಿಂದ ಜನ ಸಂಪರ್ಕ ಸಭೆ ಆ ಯೋಜನೆ](https://akshayatv.com/?p=1822): ಇತ್ತೀಚಿನ ದಿನಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಳ್ಳತನಕ್ಕೆ ಇಳಿಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಬೇಸರ ವ್ಯಕ್ತಪಡಿಸಿದರು. ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬೇಗೂರಿನ  ಮುಖ್ಯ ರಸ್ತೆಯಲ್ಲಿರುವ ಆರ್.ಎನ್.ಗೋಲ್ಡ್  ಪ್ಯಾಲೇಸ್ ನಲ್ಲಿ ಜನಸಾಮಾನ್ಯರ ಸಮಸ್ಯೆ ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಆಗ್ನೇಯ ವಿಭಾಗ, ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗ ಹಾಗೂ ಬೇಗೂರು ಪೋಲಿಸ್ ಠಾಣಾ ವತಿಯಿಂದ ಹಮ್ಮಿಕೊಂಡಿದ್ದ  ಮಾಸಿಕ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಜನರು ಊರಿಗೆ ತೆರಳುವ ಸಂದರ್ಭದಲ್ಲಿ ಸ್ಥಳೀಯ ಪೋಲಿಸ್ ಠಾಣೆಗೆ ಅಥವಾ 112ಗೆ ಕರೆ ಮಾಡಿ ತಿಳಿಸಬೇಕೆಂದು ಗೊತ್ತಿದ್ದರೂ ಪದೇಪದೇ ಅಜಾಗರೂಕತೆಯಿಂದ ಕಳ್ಳತನವಾದ ನಂತರ ಠಾಣೆಗೆ ಬಂದು ದೂರು ನೀಡಿ ಪೋಲಿಸ್ ಇಲಾಖೆ ಮೇಲೆ ಬೊಟ್ಟು ಮಾಡುತ್ತಾರೆ.ಪೋಲಿಸರ ಜೊತೆ ನಾಗರೀಕರು ಸಹಕರಿಸದೇ ಹೋದರೆ ಅಪರಾಧ ಕೃತ್ಯಗಳನ್ನು ಕಡಿವಾಣ ಹಾಕುವುದು ಹೇಗೆ ಎಂದು ಪ್ರಶ್ನಿಸಿದರು. ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಕೀಗಳನ್ನು ಹೂಕುಂಡ, ಕಿಟಕಿ ಪಕ್ಕದಲ್ಲಿ, ಚಪ್ಪಲಿ... - [ದೊಡ್ಡಹಾಗಡೆ ಗ್ರಾಮದಲ್ಲಿ ಗ್ರಾಮ ಸಭೆ ಆಯೋಜನೆ](https://akshayatv.com/?p=1817): ಆನೇಕಲ್ ಗ್ರಾಮ ಸಭೆ ಕೈಗೊಳ್ಳುವ ತೀರ್ಮಾನಗಳು ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿರುತ್ತವೆ. ಈ ನಿಟ್ಟಿನಲ್ಲಿ ಇಂತಹ ಗ್ರಾಮಗಳಲ್ಲಿ ಪ್ರತಿಯೊಬ್ಬ ನಾಗರಿಕನು ಸಕ್ರಿಯವಾಗಿ ಪಾಲ್ಗೊಳ್ಳಬೇಕಾದ ಅಗತ್ಯವಿರುತ್ತದೆ ಎಂದು ಬ್ಯಾಗಡದೇನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಎಂ.ಚಂದ್ರಶೇಖರ್‌ ಹೇಳಿದರು. ತಾಲ್ಲೂಕಿನ ದೊಡ್ಡಹಾಗಡೆ ಗ್ರಾಮದಲ್ಲಿ ಮೊದಲ ಸುತ್ತಿನ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುತ್ತಿದೆ. ಮುಖ್ಯವಾಗಿ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಚರಂಡಿ, ಕಸವಿಲೇವಾರಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಗ್ರಾಮಪಂಚಾಯತಿ ವ್ಯಾಪ್ತಿಯ ಜನರು ತಮ್ಮ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಗ್ರಾಮಸಭೆಯಲ್ಲಿ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ತಮ್ಮ ಇಲಾಖೆಯಲ್ಲಿ ದೊರೆಯುವ ಮಾಃಹಿತಿಯನ್ನು ಗ್ರಾಮಸ್ಥರಿಗೆ ತಿಳಿಸುವ ಮೂಲಕ, ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಖಾತಾ ಆಂದೋಲನವನ್ನು ಆಯೋಜಿಸಲಾಗುತ್ತಿದೆ. ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ತಮ್ಮ ಆಸ್ತಿ ತೆರಿಗೆಯನ್ನು ಕಟ್ಟುವ... - [ಸರ್ಜಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಡಾ. ಎನ್ ಕಲಾವತಿ ಮೂರ್ತಿ ಕುಮಾರ್ ಆಯ್ಕೆ](https://akshayatv.com/?p=1814): ಸರ್ಜಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಡಾ.ಎನ್ ಕಲಾವತಿ ಮೂರ್ತಿ ಕುಮಾರ್ ಮತ್ತು ನೂತನ ಉಪಾಧ್ಯಕ್ಷರಾಗಿ ಡಾ.ಎಸ್ ಮಂಜುನಾಥ್ ಸರ್ಜಾ ಚುನಾಯಿತರಾದರು. ಸರ್ಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಮಮತಾ ಎಸ್.ಎಸ್ ಮತ್ತು ಉಪಾಧ್ಯಕ್ಷರಾಗಿದ್ದ ಓಂ ಶಕ್ತಿ ಮಂಜುನಾಥ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸರಸ್ವತಮ್ಮ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಡಾ.ಎನ್ ಕಲಾವತಿ ಮೂರ್ತಿ ಕುಮಾರ್ ರವರು ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಲಾವತಿ ಅವರು 20 ಮತಗಳನ್ನು ಪಡೆದು ಜಯಗಳಿಸಿದರು. ಸರಸ್ವತಿ ಅವರು 09 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷರ ಸ್ಥಾನಕ್ಕೆ ಡಾ.ಎಸ್ ಮಂಜುನಾಥ್ ಸರ್ಜಾ ರವರು ಮಾತ್ರ ನಾಮ ಪತ್ರವನ್ನು ಸಲ್ಲಿಸಿದ್ದು ಆವಿರೋಧವಾಗಿ ಆಯ್ಕೆಯಾದರು. ಇನ್ನು ಸರ್ಜಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಕಲಾವತಿ ರವರಿಗೆ ಮತ್ತು ಉಪಾಧ್ಯಕ್ಷರಾದ ಮಂಜುನಾಥ್.ಎಸ್ ರವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಗಾತ್ರದ ಹೂವಿನ... - [ಸೂಟ್ಕೇಸ್ ನಲ್ಲಿ ಅಪರಿಚಿತ ಯುವತಿಯ ಶವ ಪತ್ತೆ](https://akshayatv.com/?p=1809): ನೀಲಿ ಬಣ್ಣದ ಸೂಟ್​ಕೇಸ್​ವೊಂದರಲ್ಲಿ 18 ವರ್ಷ ಅಸುಪಾಸಿನ ಅಪರಿಚಿತ ಯುವತಿಯ ಮೃತ ದೇಹವೊಂದು ಪತ್ತೆಯಾಗಿದೆ. ಆನೇಕಲ್ ತಾಲೂಕಿನ ಹಳೆ ಚಂದಾಪುರ ಸಮೀಪದ ರೈಲ್ವೇ ಹಳಿ ಸೂಟ್ ಕೇಸಿನಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ ಬೇರೆ ಕಡೆ ಯುವತಿಯನ್ನ ಕೊಲೆ ಮಾಡಿ ಮೃತ ದೇಹವನ್ನು ಸೂಟ್ ಕೇಸಿನಲ್ಲಿ ತುಂಬಿಕೊಂಡು ಇಲ್ಲಿ ತಂದು ಎಸೆಯಲಾಗಿದೆ ಎಂದು ಸೂರ್ಯ ಸಿಟಿ ಪೊಲೀಸರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಹಾಗೂ ಸೂರ್ಯ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ ಸ್ಥಳಕ್ಕೆ ಸೂರ್ಯನಗರ ಠಾಣೆ ಪೊಲೀಸರು ಹಾಗೂ ಬಯ್ಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಲಕಿಗೆ ಸುಮಾರು ಒಂಬತ್ತು ವರ್ಷ ವಯಸ್ಸಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಬಾಲಕಿಯ ಚಹರೆ ಇನ್ನಷ್ಟೇ ಪತ್ತೆಯಾಗಬೇಕಿದೆ.... - [ಎಸ್ ಕೆ ಗೌರೀಶ್ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜನೆ](https://akshayatv.com/?p=1806): ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ರಾಜ್ಯಾಧ್ಯಕ್ಷರು ಮತ್ತು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸಿಂಗೇನ ಅಗ್ರಹಾರ ಎಸ್.ಕೆ.ಗೌರೀಶ್ ರವರ ಹುಟ್ಟು ಹಬ್ಬ ಅಂಗವಾಗಿ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ಆಡಿಸೊನ್ನಟ್ಟಿಯ ಸಿಪಾನಿ ಸೇವಾ ಸದನದಲ್ಲಿ ಅನ್ನದಾಸೋಹ ಆಯೋಜನೆ. ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಭಿರ, ರಕ್ತದಾನ ಶಿಭಿರ. ಪೌರ ಕಾರ್ಮಿಕರಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಮವಸ್ತ ವಿತರಣೆ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ. ಸರ್ಕಾರಿ ಆಸ್ಪತ್ತೆಯ ಆರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ವೃದ್ದರಿಗೆ ಕಂಬಳಿ ವಿತರಣೆ. ಮಹಿಳೆಯರಿಗೆ ಸೀರೆ ವಿತರಣೆ ಸೇರಿದಂತೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸಿಂಗೇನ ಅಗ್ರಹಾರ ಎಸ್.ಕೆ.ಗೌರೀಶ್ ರವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು. ಹಿತೈಷಿಗಳು ವಿಭಿನ್ನವಾಗಿ ಆಚರಿಸಿದರು. ಇನ್ನು ಕಾರ್ಯಕ್ರಮದ ನೇತೃತ್ವವನ್ನು ಜಿಕೆ ವೈ ಬಾಯ್ಸ್ ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘ, ಗೌರೀಶಣ್ಣ ಅಭಿಮಾನಿ... - [ಹುಲಿಮಂಗಲ ಪಂಚಾಯಿತಿಯ ಅಧ್ಯಕ್ಷರಾಗಿ ಅಮರಾವತಿ ರಾಜಪ್ಪ ಅಧಿಕಾರ ಸ್ವೀಕಾರ](https://akshayatv.com/?p=1803): ಹುಲಿಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಿಗೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಾದರಿ ಪಂಚಾಯಿತಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮರಾವತಿ ರಾಜಪ್ಪ ತಿಳಿಸಿದರು,ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಹುಲಿಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನೂತನ ಅಧ್ಯಕ್ಷೆಯಾದ ಅಂಗವಾಗಿ ಸೋಮವಾರದಂದು ವಿಶೇಷ ಪೂಜೆ ಹಮ್ಮಿಕೊಂಡು ನಂತರ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ಮೂಲ ಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ , ಹಾಗೂ ಕಸ ವಿಲೇವಾರಿ ಸೇರಿದಂತೆ ಸೌಲಭ್ಯಗಳನ್ನು ಒದಗಿಸಲು ಪ್ರಮಾಣಿಕವಾಗಿ ಕೆಲಸ ಮಾಡಲಾಗುವುದು ಹಾಗೂ ಸದಸ್ಯರ ಸಲಹೆಗಳು ಪಡೆದು ಎಲ್ಲಾರು ಒಟ್ಟಿಗೆ ಸೇರಿ ಪಂಚಾಯಿತಿಯನ್ನು ಅಭಿವೃದ್ದಿ ಪಡಿಸಲಾಗುವುದು ಎಂದರು. ಇನ್ನು ನೂತನ ಅಧ್ಯಕ್ಷರ ಅಧಿಕಾರ ಸ್ವೀಕರ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಸೈಯದ್ ಸಾಧೀಕ್, ಗಜೇಂದ್ರ,ಉಪಾಧ್ಯಕ್ಷರಾದ ಷರೀಫ್,ದೊಡ್ಡ ತೋಗೂರು ಪಂ. ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಕೊಪ್ಪ ರಾಮಾಂಜಿನಪ್ಪ, ಪಾಪಣ್ಣ, ಅನ್ಸಾರ್, ರವಿಕುಮಾರ್,ಹಾಗೂ ಎಲ್ಲಾ ಸದಸ್ಯರು,... - [ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ](https://akshayatv.com/?p=1799): ಆನೇಕಲ್ ತಾಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ 37 ಕೋಟಿ ವೆಚ್ಚದಲ್ಲಿ ನೂತನವಾಗಿ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಆನೇಕಲ್ ಶಾಸಕ ಶಿವಣ್ಣ ನೇತೃತ್ವದಲ್ಲಿ ಆಸ್ಪತ್ರೆಯ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು. ಆನೇಕಲ್ ತಾಲೂಕು ದೊಡ್ಡದಾಗಿದ್ದು 100 ಹಾಸಿಗೆಗಳ ಒಂದೇ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ದೊಮ್ಮಸಂದ್ರ ಭಾಗದಲ್ಲಿ ಮತ್ತೊಂದು ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬಡ ಹಾಗೂ ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಯ ದುಬಾರಿ ಶುಲ್ಕ ಭರಿಸಲು ಸಾಧ್ಯವಿಲ್ಲ, ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಜೊತೆ ಸಿಬ್ಬಂದಿಗಳ ಕೊರತೆ ನಿಗಿಸಲು ನೇಮಕಾತಿ ಪ್ರಕ್ರಿಯೆ ಸಹ ನಡೆಸಲಾಗುತ್ತಿದೆ ಎಂದರು. ಬಳಿಕ ಮಾತನಾಡಿದ ಆನೇಕಲ್ ಶಾಸಕ ಶಿವಣ್ಣ ದೊಮ್ಮಸಂದ್ರ ಭಾಗದಲ್ಲಿ ತಾಲೂಕು... - [ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾಗಿ ಆರ್ ಕೆ ರಮೇಶ್ ಅವಿರೋಧ ಆಯ್ಕೆ](https://akshayatv.com/?p=1796): ಆನೇಕಲ್ ತಾಲ್ಲೂಕಿನಿಂದ ಬೆಂಗಳೂರು ಹಾಲು ಒಕ್ಕೂಟಕ್ಕೆ (ಬಮೂಲ್) ನಿರ್ದೇಶಕರಾಗಿ ಆರ್.ಕೆ.ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಮೂಲ್ (ಬೆಂಗಳೂರು ಹಾಲು ಒಕ್ಕೂಟ ಲಿಮಿಟೆಡ್) ನಿರ್ದೇಶಕ ಸ್ಥಾನಕ್ಕೆ ಆರ್.ಕೆ.ರಮೇಶ್ ಅವರು ನಾಮಪತ್ರ ಸಲ್ಲಿಸಿದ್ದರು. ಇತರೆ ಆರು ಜನ ಆಕಾಂಕ್ಷಿಗಳು ಸಲ್ಲಿಸಿದ ನಾಮಪತ್ರಗಳು ಅಮಾನ್ಯವಾದ ಹಿನ್ನೆಲೆಯಲ್ಲಿ ಆರ್.ಕೆ.ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಮೂಲ್ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಂಎಲ್ಎ ಅಭ್ಯರ್ಥಿಯಾಗಿ ಸೋತಿದ್ದರೂ ಸಹ ಜನಮನ್ನಣೆ ಗಳಿಸಿದ ಹಿನ್ನೆಲೆ ಮತ್ತೋಮ್ಮೆ ಗೆದ್ದಿದ್ದಾರೆ ಎಂದು ಕುಟುಂಬ ವರ್ಗ ಹಾಗೂ ಕ್ಷೇತ್ರದ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಹೆನ್ನಾಗರದಲ್ಲಿ 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಗಳಿಗೆ ಚಾಲನೆ ನೀಡಿದ ಡಿಕೆ ಶಿವಕುಮಾರ್](https://akshayatv.com/?p=1790): ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತ ಸಂಪನ್ಮೂಲಗಳ ಅಡಿಯಲ್ಲಿ 5 ಕೋಟಿ 13 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು‌. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ , ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಆನೇಕಲ್ ಶಾಸಕ ಶಿವಣ್ಣ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು. ಹೆನ್ನಾಗರ ಪಂಚಾಯಿತಿ ವ್ಯಾಪ್ತಿಯಲ್ಲಿ ವರ್ಗ1 ಹಾಗೂ 15 ನೇ ಹಣಕಾಸು ಯೋಜನೆಯಡಿ ಸ್ತ್ರೀ ಶಕ್ತಿ ಭವನ, ಗ್ರಂಥಾಲಯ ಕಟ್ಟಡ, ವಿಎಸ್‌ಎಸ್‌ಎನ್ ಕಟ್ಟಡ, ಅಂಗನವಾಡಿ ಕಟ್ಟಡ ಹಾಗೂ ಹೈಮಾಸ್ಕ್ ದೀಪಗಳನ್ನ ನಿರ್ಮಿಸಲು ಇಂದು ಚಾಲನೆ ನೀಡಲಾಗಿದೆ. ಈ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆನ್ನಾಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ರೈತರಿಗೆ ಹಸುಗಳು, ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ , ಅಡುಗೆ ಅನಿಲ ಸಿಲಿಂಡರ್, ತ್ರಿಚಕ್ರ ವಾಹನ , ಹಾಗೂ 350 ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಗುತ್ತಿದೆ. ಇಂತಹ ಕಲ್ಯಾಣ ಕಾರ್ಯಕ್ರಮಗಳ... - [ಭಾರಿ ಮಳೆಗೆ ಆಟೋ ಮೇಲೆ ಮರ ಬಿದ್ದು ಚಾಲಕ ಸಾವು](https://akshayatv.com/?p=1787): ಬೆಂಗಳೂರು ನಗರದ ಹಲವೆಡೆ ಜೋರಾಗಿ ಸುರಿದ ಮಳೆಯಿಂದಾಗಿ ಕತ್ರಿಗುಪ್ಪೆ ರಸ್ತೆಯಲ್ಲಿ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಆಟೋವೊಂದರ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಆಟೋ ಚಾಲಕ ಮಹೇಶ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಈ ದುರ್ಘಟನೆ ಭಾರೀ ಮಳೆಯಿಂದಾಗಿ ಉಂಟಾದ ಗಾಳಿಯಿಂದ ಮರ ಬಿದ್ದ ಕಾರಣ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್, ಆ ಸಂದರ್ಭದಲ್ಲಿ ಆಟೋದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎನ್ನಲಾಗಿದೆ ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಸಿಎಂ ಸಿದ್ದರಾಮಯ್ಯ ರವರಿಂದ ಪೌರಕಾರ್ಮಿಕರಿಗೆ ಸೇವಾ ಖಾಯಂ ಪತ್ರ ವಿತರಣೆ](https://akshayatv.com/?p=1784): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 12,692 ಪೌರಕಾರ್ಮಿಕರಿಗೆ ಸೇವಾ ಖಾಯಂ ಪತ್ರ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ , ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಣದೀಪ್ ಸಿಂಗ್ ಸರ್ಜೆವಾಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೃಷಿಕ, ಕಾರ್ಮಿಕ, ಶಿಕ್ಷಕ, ಸೈನಿಕ ಈ ದೇಶದ ಅಭಿವೃದ್ಧಿಯ ಆಧಾರಸ್ತಂಭಗಳು. ಪೌರ ಕಾರ್ಮಿಕರನ್ನು ಸ್ವಚ್ಛತಾ ರಾಯಭಾರಿಗಳಂತೆ ನಮ್ಮ ಸರ್ಕಾರ ಭಾವಿಸುತ್ತದೆ. ಪರಿಸರ ಯೋಧರಂತೆ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಬೆಂಗಳೂರು ನಗರವನ್ನು ಸುಂದರವಾಗಿಸಿದ್ದಾರೆ. ಚುನಾವಣೆ ಪೂರ್ವದಲ್ಲಿ ನಿಮ್ಮ ಬದುಕಿಗೆ ಹೊಸ ರೂಪವನ್ನು ನೀಡುತ್ತೇವೆ ಎಂದು ಪೌರಕಾರ್ಮಿಕರಿಗೆ ಮಾತು ಕೊಟ್ಟಿದ್ದೆವು. ಕೊಟ್ಟ ಮಾತಿನಂತೆ 12 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರ ಕೆಲಸ ಖಾಯಂಗೊಳಿಸಿ, ಖಾಯಂಮಾತಿ ಪತ್ರ ನೀಡುವ ಮೂಲಕ ಶ್ರಮಿಕರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ ಎಂದರು. ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಪೌರಕಾರ್ಮಿಕರ ಮಕ್ಕಳು ವಿದ್ಯಾವಂತರಾಗಿ ಉನ್ನತ ಹುದ್ದೆಯನ್ನು... - [ಸಿ ಐ ಟಿ ಯು ಸಮಿತಿ ವತಿಯಿಂದ ಕಾರ್ಮಿಕರ ದಿನದ ಅಂಗವಾಗಿ ಬೃಹತ್ ರ್ಯಾಲಿ](https://akshayatv.com/?p=1780): ಸಿಐಟಿಯು ಆನೇಕಲ್ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ತಾಲ್ಲೂಕಿನ ಚಂದಾಪುರ ಸರ್ಕಲ್ ನಲ್ಲಿ ಮೇ ಡೇ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿ ಕೈಗಾರಿಕಾ ಕಾರ್ಮಿಕರು,ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು,ರೈತ ಮುಖಂಡರುಗಳು ಮೆರವಣಿಗೆಯಲ್ಲಿ ಕಾರ್ಮಿಕರು ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಾರ್ಮಿಕ ಹಕ್ಕುಗಳನ್ನ ರಕ್ಷಣೆ ಮಾಡುವ ಜೊತೆಗೆ ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಉಂಟಾಗುತ್ತಿರುವ ಅನ್ಯಾಯ ತಡೆಗೆ ಸೂಕ್ತ ‌ಕಾನೂನು ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು. ಬಹಿರಂಗ ಸಭೆಯ ಸ್ವಾಗತವನ್ನು ಸಿಐಟಿಯು ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಸುನೀಲ್ ಜಿ.ಪಿ. ಮಾಡಿದರು. ಧ್ವಜಾರೋಹಣವನ್ನು ಸಿಐಟಿಯು ತಾಲ್ಲೂಕು ಅಧ್ಯಕ್ಷರಾದ ಪಿ.ಸುರೇಶ ನೆರವೇರಿಸಿ ಮಾತನಾಡಿದರು.ತಾಲೂಕು ಉಪಾಧ್ಯಕ್ಷರಾದ ಡಿ.ಮಹದೇಶ್ ಮಾತನಾಡಿದರು.ಸಿಐಟಿಯು ರಾಜ್ಯ ಕಾರ್ಯದರ್ಶಿ ಬಿ.ಎನ್. ಮಂಜುನಾಥ್ ರವರು ಭಾಗವಹಿಸಿ ಮಾತನಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಕೆ. ಬಾಲರಾಜ್ ರವರು ಮಾತನಾಡಿದರು.ತಾಲ್ಲೂಕಿನ ಭೂಸ್ವಾಧೀನ ಹೋರಾಟ ಸಮಿತಿ ಮುಖಂಡರು ಚಂದ್ರಾರೆಡ್ಡಿ ಭಾಗವಹಿಸಿ ಮಾತನಾಡಿದರು. ತಾಲೂಕು ಖಜಾಂಚಿ ಜಿ.ಡಿ. ಚನ್ನಪ್ಪ ರವರು ವಂದನಾರ್ಪಣೆಯನ್ನು ಸಲ್ಲಿಸಿದರು. - [ಪ್ರಜ್ಞೆ ತಪ್ಪಿಸಿ ವೃದ್ದೆ ಬಳಿ ಒಡವೆಗಳ ಕಳ್ಳತನ](https://akshayatv.com/?p=1776): ಕಲ್ಲು ಕೊಟ್ಟು ಪ್ರಜ್ಞೆ ತಪ್ಪಿಸಿ ವೃದ್ದೆ ಬಳಿ ಇದ್ದ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಲಾಗಿದೆ. ಆನೇಕಲ್ ತಾಲೂಕಿನ ಕೆಂಪೊಡರಹಳ್ಳಿ ಗ್ರಾಮದಲ್ಲಿ ಇಂದು ಘಟನೆ ನಡೆದಿದೆ ಅಡ್ರೆಸ್ ಕೇಳುವ ನೆಪದಲ್ಲಿ ಮನೆ ಬಳಿ ಬಂದ ದಂಪತಿಗಳು ವೃದ್ದೆ ಸಾವಿತ್ರಮ್ಮ ಬಳಿ ಬಂದು ಕಲ್ಲು‌ ಇರುವ ಒಂದು ಪ್ಯಾಕೆಟ್ ನೀಡಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ವೃದ್ದೆ‌ ಬಳಿ ಇದ್ದ 40 ಗ್ರಾಂ ಚಿನ್ನದ ಒಡವೆ ಕದ್ದು ದಂಪತಿ‌ ಪರಾರಿಯಾಗಿದ್ದಾರೆ. ಟಿವಿಎಸ್ ಗಾಡಿಯಲ್ಲಿ ದಂಪತಿಗಳು ಗ್ರಾಮದಲ್ಲಿ ಓಡಾಡಿರುವ ದೃಶ್ಯಗಳು ಸಿ ಸಿ ಕ್ಯಾಮೆರಾ ಗಳಲ್ಲಿ ಸೆರೆಯಾಗಿದೆ. ಚಿನ್ನದ ಒಡವೆಗಳನ್ನ ಕಳೆದುಕೊಂಡ ಸಾವಿತ್ರಮ್ಮ ಕಂಗಾಲಾಗಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಲಾಗಿದೆ ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಟೆಲಿ ಲಾ ಮೂಲಕ ಮಹಿಳೆಯರು ಕಾನೂನು ಅರಿವು ಪಡೆಯಲು ಮನವಿ](https://akshayatv.com/?p=1771): ದೇಶದಲ್ಲಿ ಕಾನೂನು ಅರಿವು ಕೊರತೆಯಿಂದ ಮಹಿಳೆಯರು, ಮಕ್ಕಳು, ದಲಿತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಹೀಗಾಗಿ ಟೆಲಿ ಲಾ ಮೂಲಕ ಮಹಿಳೆಯರು ಕಾನೂನು ಅರಿವು ಪಡೆಯಬೇಕು ಎಂದು ವಕೀಲರಾದ ಪುರುಷೋತ್ತಮ್ ಮನವಿ ಮಾಡಿದ್ದಾರೆ ತಾಲ್ಲೂಕಿನ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಟೈಲರಿಂಗ್ ಮತ್ತು ಕಂಪ್ಯೂಟರ್ ತರಬೇತಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಟೆಲಿ ಲಾ ಮೂಲಕ ಮನೆ ಮನೆಗೆ ಕಾನೂನು ಅರಿವು ತಲುಪಿಸುವ ಕೆಲಸ ಮಾಡುತ್ತಿದೆ.‌ ಅದನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಕೌಶಲ್ಯ ತರಬೇತುದಾರರಾದ ಸೌಮ್ಯ ಮಾತನಾಡಿ, ಟೆಲಿ ಲಾ ಯೋಜನೆ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಅನುಕೂಲವಾಗುತ್ತಿದೆ, ಆನ್ ಲೈನ್ ಮೂಲಕ ಉಚಿತವಾಗಿ ಕಾನೂನು ಅರಿವು ಮೂಡಿಸಲಾಗುತ್ತಿದೆ. ಈ ಬಗ್ಗೆ ಗ್ರಾಮಾಂತರ ಭಾಗದ ಜನತೆಗೆ ಹೆಚ್ಚಿನ ಅರಿವು ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಕೀಲರಾದ ಇಚ್ಚಂಗೂರು ಆಶಾ, ತರಬೇತಿದಾರರಾದ ಸುನಿತಾ, ರಘುರಾಮ್, ರಾಜು ಹಾಗೂ ವಿದ್ಯಾರ್ಥಿಗಳಾದ ಚೈತನ್ಯಾ, ನವ್ಯಾ, ಅರ್ಚಿತಾ, ಗೀತಾ, ಭವ್ಯಾ, ನಿಶಾಂತಿ,... - [ಆನೇಕಲ್ ನಲ್ಲಿ ಅದ್ದೂರಿ‌ ಬಸವ ಜಯಂತಿ ಕಾರ್ಯಕ್ರಮ](https://akshayatv.com/?p=1767): ಮಹಾಮಂಡಳಿ ಟ್ರಸ್ಟ್ ಮತ್ತು ವೀರಶೈವ ಲಿಂಗಾಯಿತಿ ಬಂಧುಗಳ ವತಿಯಿಂದ ಆನೇಕಲ್ ನಲ್ಲಿ ಬಸವಣ್ಣರವರ ಜಯಂತಿಯನ್ನು ಅದ್ದೂರಿ ಆಚರಿಸಲಾಯಿತು. ಬಸವ ಜಯಂತಿ ಪ್ರಯುಕ್ತ ಪಟ್ಟಣದ ಪ್ರಮುಖ ಭೀದಿಗಳಲ್ಲಿ ಮಂಗಳವಾದ್ಯ, ವೀರಗಾಸೆ, ನಂದಿಧ್ವಜದೊಂದಿಗೆ ಅದ್ದೂರಿಯಾಗಿ ಮೆರವಣೆಯ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಇದೇ ವೇಳೆ ರಾಜಾಪುರ ಸಂಸ್ಥಾನ ಮಠದ ರಾಜೇಶ್ವರ ಶಿವಚಾರ್ಯ ಮಹಾಸ್ವಾಮೀಜಿ ಮಾತನಾಡಿ, ೧೨ನೇ ಶತಮಾನದಲ್ಲಿ ಕಾಯಕ ತತ್ವದ ಮೂಲಕ ಎಲ್ಲ ಜಾತಿ ಸಮುದಾಯಗಳನ್ನು ಒಂದು ವೇದಿಕೆಯಡಿ ತಂದಿದ್ದಾರೆ. ಸಮಾಜದ ಶಾಂತಿ ಸೌಹಾರ್ದತೆಗೆ ಬಸವಣ್ಣ ಚಿಂತನೆಗಳು ಎಂದೆAದಿಗೂ ಪ್ರಸ್ತುತವೆಂದು ತಿಳಿಸಿದರು. ಸಮ ಸಮಾಜದ ತತ್ವದಡಿ ನಾವೆಲ್ಲರೂ ಸಾಗಿದಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ದಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಬಸವಣ್ಣ ಸೇರಿದಂತೆ ಎಲ್ಲ ವಚನಕಾರರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸುವುದೆಡೆಗೆ ಕೈಜೋಡಿಸೋಣವೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಗುಮ್ಮಳಪುರ ಸಂಸ್ಥಾನದ ಮಠದ ಶಿವಾನಂದ ಶಿವಚಾರ್ಯ ಸ್ವಾಮೀಜಿಗಳು, ಪುರಸಭೆ ಅಧ್ಯಕ್ಷೆ ಸುಧಾ ನಿರಂಜನ್, ವೀರಶೈವ ಮಹಾ ಮಂಡಳಿ ಟ್ರಸ್ಟ್ನ ಪದಾಧಿಕಾರಿಗಳಾದ ಕಿರಣ್ ಪ್ರಕಾಶ್, ಎಸ್‌ಆರ್‌ಎಸ್ ಚಂದ್ರಶೇಖರ್,... - [ಅರೇನೂರು ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ 134 ನೇ ಜಯಂತಿ ಆಚರಣೆ](https://akshayatv.com/?p=1765): ಆನೇಕಲ್ ತಾಲ್ಲೂಕಿನ ಬಿದರಗುಪ್ಪೆ ಪಂಚಾಯಿತಿ ವ್ಯಾಪ್ತಿಯ ಅರೇನೂರು ಗ್ರಾಮದಲ್ಲಿ ಡಾ. ಬಿ ಅರ್ ಅಂಬೇಡ್ಕರ್ ರವರ 134 ನೇ ಜಯಂತಿಯನ್ನು ಮಾಡಲಾಯಿತು‌. ಡಾ.ಅಂಬೇಡ್ಕರ್ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಬಾಬಾ ಸಾಹೇಬರ ಪ್ರತಿಮೆಯನ್ನು ಗ್ರಾಮದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿ ಅಂಬೇಡ್ಕರ್ ರವರ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ನೇತೃತ್ವವನ್ನು ಭರತ್ ಕುಮಾರ್ , ಅಜಯ್ ಕುಮಾರ್ ಹಾಗೂ ಎ.ವಿ ಮುನಿರಾಜು ರವರು ವಹಿಸಿದ್ದರು. ನೆರಳೂರು ಪಂಚಾಯಿತಿ ಸದಸ್ಯರಾದ ಮಂಜುಳಾರವರು ಮಾತನಾಡಿ ಅಂಬೇಡ್ಕರ್ ರವರು ಆ ಕಾಲದಲ್ಲಿಯೇ 32 ಡಿಗ್ರಿಗಳನ್ನು ಪಡೆದು ಭಾರತ ಸಂವಿಧಾನ ರಚನೆ ಮಾಡಿದ್ದಾರೆ. ಆ ಮೂಲಕ ತುಳಿತಕ್ಕೆ ಒಳಗಾದ ಪ್ರಪಂಚದ ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ ನೀಡಿದ ಧೀಮಂತ ನಾಯಕ , ಹಾಗಾಗಿ ದೇಶಾದ್ಯಂತ ಬಾಬಾ ಸಾಹೇಬರ ಜಯಂತಿಯ ಹಬ್ಬದ ರೀತಿ ಆಚರಣೆ ಮಾಡಲಾಗುತ್ತಿದೆ ಎಂದರು. ದಲಿತ ಮುಖಂಡ ಎಂಸಿ ಹಳ್ಳಿ ವೇಣು ಮಾತನಾಡಿ ವರ್ಷ ಪೂರ್ತಿ ಅಂಬೇಡ್ಕರ್ ರವರ ಜನ್ಮದಿನವನ್ನ ಆಚರಣೆ ಮಾಡಲಾಗುತ್ತದೆ. ದೇಶದ... - [ಕಮ್ಮಸಂದ್ರ ಅಗ್ರಹಾರ ಗ್ರಾಮದಲ್ಲಿ ನೂತನ ಅಂಬೇಡ್ಕರ್ ಭವನ ಹಾಗೂ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ](https://akshayatv.com/?p=1752): ಆನೇಕಲ್ ತಾಲ್ಲೂಕಿನ ಕಮ್ಮಸಂದ್ರ ಅಗ್ರಹಾರ ಗ್ರಾಮದಲ್ಲಿ ನೂತನವಾಗಿ ಅಂಬೇಡ್ಕರ್ ಭವನ ಹಾಗೂ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆನೇಕಲ್ ಶಾಸಕ ಶಿವಣ್ಣ ಹಾಗೂ ಬ್ಯಾಗಡದೇನಹಳ್ಳಿ ಪಂಚಾಯಿತಿ ಸದಸ್ಯರಿಂದ ಅಂಬೇಡ್ಕರ್ ಭವನ ಹಾಗೂ ನೂತನ ಗ್ರಂಥಾಲಯ ಲೋಕಾರ್ಪಣೆ ಮಾಡಲಾಗಿದೆ ಈ ಕುರಿತು ಮಾತನಾಡಿದ ಶಾಸಕ ಶಿವಣ್ಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ನೂತನ ಗ್ರಂಥಾಲಯ ಉಪಯೋಗವಾಗಬೇಕು. ನಾನು ಸಹ 5 ಲಕ್ಷ ಮೌಲ್ಯದ ಪುಸ್ತಕಗಳನ್ನ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡುವುದಾಗಿ ಶಾಸಕ ಶಿವಣ್ಣ ತಿಳಿಸಿದರು ಅಂಬೇಡ್ಕರ್ ರವರು ಒಂದು ವರ್ಗ ಅಥವಾ ಜಾತಿಗೆ ಸೀಮೀತ ವ್ಯಕ್ತಿಯಲ್ಲ, ಭಾರತದ ಸಂವಿಧಾನವನ್ನ ರಚನೆ ಮಾಡಿ ತಳ ಸಮೂದಾಯಕ್ಕೆ ಮೀಸಲಾತಿ ನಿಡಿದ ಪರಿಣಾಮ ನಾವೆಲ್ಲ ಇಂದು ಜನಪ್ರತಿನಿಧಿಗಳಾಗಿ ಜನ ಸೇವೆ ಮಾಡಲು ಸಾಧ್ಯವಾಗಿದೆ. ಅಂಬೇಡ್ಕರ್ ರವರ ಶಿಕ್ಷಣ , ಸ‌ಂಘಟನೆ , ಹೋರಾಟವನ್ನ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಡಿಸಿಕೊಳ್ಳುವ ಮೂಲಕ ಅಂಬೇಡ್ಕರ್ ರವರ ಆಶಯಗಳನ್ನ ಎತ್ತಿ ಹಿಡಿಯಬೆಕೆಂದು ಜನರಿಗೆ ಕಿವಿಮಾತು ಹೇಳಿದರು. ಇದೇ ವೇಳೆ... - [ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ](https://akshayatv.com/?p=1746): ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಇಂದು ಚಾಲನೆ ನೀಡಲಾಗಿದೆ. ಶಾಸಕರಾದ ಕೃಷ್ಣಪ್ಪ ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಹಲವು ವರ್ಷಗಳಿಂದ ಕಾಲೇಜು ಆವರಣದಲ್ಲಿ ಹೆಚ್ಚುವರಿ ಕೊಠಡಿಗಳನ್ನ ನಿರ್ಮಾಣ ಮಾಡಿಕೊಡುವಂತೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು. ಹೀಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೂತನವಾಗಿ ಕೊಠಡಿಗಳನ್ನ ನಿರ್ಮಿಸುವ ಕಾಮಗಾರಿಗೆ ಇಂದು ಶಾಸಕರು ಚಾಲನೆ ನೀಡಿದ್ದಾರೆ ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಮಾರೇನಹಳ್ಳಿಯಲ್ಲಿ ಶಾಸಕರ ಸಮ್ಮುಖದಲ್ಲಿ ಜನಸ್ಪಂದನಾ ಕಾರ್ಯಕ್ರಮ](https://akshayatv.com/?p=1743): ಯಶವಂತಪುರ ವಿಧಾನಸಭಾ ಕ್ಷೇತ್ರದ ಚೋಳನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಿನಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತದ ವತಿಯಿಂದ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ ಸೋಮಶೇಖ‌ರ್ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಿ ಅಹವಾಲು ಸ್ವೀಕರಿಸಿದರು. ಜೊತೆಗೆ ಫಲಾನುಭವಿಗಳಿಗೆ ಶಾಸಕರ ಸಮ್ಮುಖದಲ್ಲಿ ಸವಲತ್ತುಗಳ ಮಂಜೂರಾತಿ ಪತ್ರ ವಿತರಿಸಲಾಯಿತು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಉತ್ತರಹಳ್ಳಿಯ ಕೆನರಾ ಬ್ಯಾಂಕ್‌ ಬಡಾವಣೆಯಲ್ಲಿ ಒಳಚರಂಡಿ ಪೈಪ್ ಲೈನ್ ಕಾಮಗಾರಿಗೆ ಚಾಲನೆ](https://akshayatv.com/?p=1740): ಬೆಂ.ದಕ್ಷಿಣ ವ್ಯಾಪ್ತಿಯ ಉತ್ತರಹಳ್ಳಿಯ ಕೆನರಾ ಬ್ಯಾಂಕ್‌ ಬಡಾವಣೆಯಲ್ಲಿ ನೂತನ ಒಳಚರಂಡಿ ಪೈಪ್ ಲೈನ್ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಶಾಸಕ ಕೃಷ್ಣಪ್ಪ ಹಾಗೂ ಸ್ಥಳೀಯ ನಿವಾಸಿಗಳು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಒಳಚರಂಡಿ ಸಮಸ್ಯೆಯಿಂದ ಬಡಾವಣೆ ನಿವಾಸಿಗಳಿಗೆ ಅನಾನುಕೂಲ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಶಾಸಕರ ಸಮ್ಮುಖದಲ್ಲಿ ಒಳಚರಂಡಿ ಪೈಪ್ ಲೈನ್ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಆನೇಕಲ್‌ ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ](https://akshayatv.com/?p=1737): ಆನೇಕಲ್‌ ಪಟ್ಟಣದ ಶ್ರೀರಾಮ ಕುಠೀರದಲ್ಲಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಲಯನ್ಸ್ ಕ್ಲಬ್ ರಾಗಿ ನಾಡು, ನಿಸರ್ಗ ಸೇವಾ ಟ್ರಸ್ಟ್, ಲಕ್ಷ್ಮಿ, ವೆಂಕಟೇಶ್ವರ ಮೋಟಾರ್ಸ್ ಹಾಗೂ ಡ್ರೈವ್ ಎಕ್ಸ್ ಸಹಭಾಗಿತ್ವದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಮಂದಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಗ್ರಾಮೀಣ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಉಚಿತವಾಗಿ ನೆರವೇರಿಸಲಾಯಿತು - [ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ](https://akshayatv.com/?p=1734): ಕುಡಿದ ಮತ್ತಿನಲ್ಲಿ ಕುಲ್ಲಕ ಕಾರಣಕ್ಕೆ ಇಬ್ಬರು ಯುವಕರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಗಯ್ಯನ ದೊಡ್ಡಿ ಗ್ರಾಮದಲ್ಲಿ ಇಂದು ಘಟನೆ ನಡೆದಿದೆ. 30 ವರ್ಷದ ಸುರೇಶ್ ಸಾವನಪ್ಪಿರುವ ಯುವಕ. ಕಾಂತರಾಜು ಅಂಡ್ ಗ್ಯಾಂಗ್ ಬಾರ್ ನಲ್ಲಿ ಮದ್ಯಪಾನ ಮಾಡುವ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಬಳಿ ಕಾಂತರಾಜು ಸುರೇಶನನ್ನ ಹಿಂಬಾಲಿಸಿ ಬಂದು ಮನೆ ಬಳಿ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ವಿಜಯನಗರದ ಪೈಪ್ ಲೈನ್ ರಸ್ತೆಯಲ್ಲಿ ಭಾರಿ ಗಾಳಿಯಿಂದ ರಸ್ತೆಗೆ ಬಿದ್ದ ಮರ](https://akshayatv.com/?p=1731): ಬೆಂಗಳೂರಿನ ವಿಜಯನಗರದ ಪೈಪ್ ಲೈನ್ ರಸ್ತೆಯಲ್ಲಿ ಭಾರಿ ಗಾಳಿಯಿಂದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ಪರಿಣಾಮ ಮರದ ಕೆಳಗೆ ನಿಲ್ಲಿಸಿದ್ದ ಕಾರು ಸಂಪೂರ್ಣವಾಗಿ ಜಖಂ ಆಗಿದೆ. ಸಂಜೆ ಭಾರಿ ಗಾಳಿ ಬಿಸಿದ ಪರಿಣಾಮ ಮರ ನೆಲಕ್ಕೆ ಅಪ್ಪಳಿಸಿದೆ. ರಸ್ತೆಗೆ ಮರ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು . ಕೂಡಲೇ ಬಿಬಿಎಂಪಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಮರವನ್ನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಬಳಗಾರನಹಳ್ಳಿಯ ನೇರಳೂರು ಪಂಚಾಯಿತಿಯಿಂದ ಗ್ರಾಮ ಸಭೆ ಆಯೋಜನೆ](https://akshayatv.com/?p=1726): ಬಳಗಾರನಹಳ್ಳಿಯ ನೆರಳೂರು ಪಂಚಾಯಿತಿಯು ಗ್ರಾಮಸಭೆ ಆಯೋಜನೆ ಮಾಡಲಾಗಿತ್ತು. ಗ್ರಾಮ ಸಭೆಗೆ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಗ್ರಾಮ ಸಭೆ ನಡೆಸಿದಂತೆ ಪಂಚಾಯಿತಿ ಸದಸ್ಯರನ್ನ ತರಾಟೆಗೆ ತೆಗೆದುಕೊಂಡರು. ತಹಶೀಲ್ದಾ‌ರ್, ಇಓ, ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮ ಸಭೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕಾಟಾಚಾರಕ್ಕೆ ಗ್ರಾಮಸಭೆ ನಡೆಸದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದಸ್ಯರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ಉಂಟಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಪಹಲ್ಲಾಮ್ ನಲ್ಲಿ ಉಗ್ರರ ಹತ್ಯಾಕಾಂಡ ಖಂಡಿಸಿ ಆನೇಕಲ್ ನಲ್ಲಿ ಬಿಜೆಪಿ ವತಿಯಿಂದ ಮೊಂಬತ್ತಿ ಹಚ್ಚಿ ಪ್ರತಿಭಟನೆ](https://akshayatv.com/?p=1722): ಕಾಶ್ಮೀರದ ಪಹಲ್ಲಾಮ್ ನಲ್ಲಿ ಉಗ್ರರ ಹತ್ಯಾಕಾಂಡ ಖಂಡಿಸಿ ಆನೇಕಲ್‌ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಮೊಂಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಮಾಚಿ ಕೇಂದ್ರ ಸಚಿವ ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪುಲ್ವಾಮಾ ಬಳಿಕ ಪಹಲಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಕೃತ್ಯದಲ್ಲಿ ಅಮಾಯಕರು ಬಲಿಯಾಗಿದ್ದಾರೆ. ಇಲ್ಲಿನ ಭಯೋತ್ಪಾದಕರಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ತಕ್ಕ ಪಾಠ ಕಲಿಸಲಿದೆ ಎಂದು ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಮೂಡಲಪಾಳ್ಯ ಸಮೀಪದ ಶಕ್ತಿ ಗಾರ್ಡನ್ ನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ](https://akshayatv.com/?p=1719): ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡದಪಾಳ್ಯ ಸಮೀಪವಿರುವ ಶಕ್ತಿ ಗಾರ್ಡನ್ ನಲ್ಲಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕರಾದ ಪಿ.ಯ ಕೃಷ್ಣ ಹಾಗೂ ಸ್ಥಳೀಯ ಮುಖಂಡರು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಶಕ್ತಿ ಗಾರ್ಡನ್ ನಲ್ಲಿ ಇತ್ತೀಚೆಗೆ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿತ್ತು ಹೀಗಾಗಿ ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಎಂದು ರಸ್ತೆಗಳ ದಾಂಬರೀಕರಣ ಕಾಮಗಾರಿಗೆ ಶಾಸಕರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಮಾಚೋಹಳ್ಳಿಯಲ್ಲಿ 1 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ](https://akshayatv.com/?p=1716): ಯಲಹಂಕ ವಿಧಾನಸಭಾ ಕ್ಷೇತ್ರದ ಮಾಚೋಹಳ್ಳಿಯಲ್ಲಿ 1 ಕೊಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಯಲಹಂಕ ಶಾಸಕ ವಿಶ್ವನಾಥ್ ನೂತನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಮಾಚೋ ಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿತ್ತು. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಶಾಸಕರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಚಿಕ್ಕಹೊಸಹಳ್ಳಿಯಲ್ಲಿ ಅಗ್ನಿಕೊಂಡದಲ್ಲಿ ಓಡುವಾಗ ಆಯತಪ್ಪಿ ಬಿದ್ದ ವ್ಯಕ್ತಿ](https://akshayatv.com/?p=1712): ಆನೇಕಲ್ ತಾಲೂಕಿನ ಚಿಕ್ಕ ಹೊಸಹಳ್ಳಿ ಗ್ರಾಮದಲ್ಲಿ ಅಗ್ನಿಕೊಂಡದಲ್ಲಿ ಓಡುವಾಗ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರಿಗೆ ಸುಟ್ಟ ಗಾಯಗಳಾಗಿವೆ. ಇಂದು ಗ್ರಾಮದಲ್ಲಿ ಶ್ರೀ ಮಲೈ ಮಹದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಅಗ್ನಿಕೊಂಡ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಅರ್ಚಕರ ಜೊತೆಯಲ್ಲಿ ಅಗ್ನಿಕೊಂಡದಲ್ಲಿ ಓಡುತ್ತಿದ್ದ ವ್ಯಕ್ತಿ ಕೆಂಡದ ಮೇಲೆ ಬಿದ್ದ ಪರಿಣಾಮ ಮೈ ಮೇಲೆ ಸುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಹಾರಗದ್ದೆಯಲ್ಲಿ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ಅದ್ದೂರಿ ಬ್ರಹ್ಮರಥೋತ್ಸವ](https://akshayatv.com/?p=1708): ಆನೇಕಲ್‌ ತಾಲ್ಲೂಕಿನ ಹಾರಗದ್ದೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಚನ್ನಕೇಶವ ಸ್ವಾಮಿಯ ಅದ್ದೂರಿ ಬ್ರಹ್ಮರಥೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು ಅಲಂಕೃತ ರಥದಲ್ಲಿ ಚನ್ನಕೇಶವ ಸ್ವಾಮಿಯ ಮೂರ್ತಿಯನ್ನು ಕೂರಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡಿಸಲಾಯಿತು. ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ರಥವನ್ನ ಎಳೆದ ಭಕ್ತಾದಿಗಳು ತಮ್ಮ ಕೋರಿಕೆಗಳನ್ನ ಈಡೇರಿಸುವಂತೆ ಪ್ರಾರ್ಥಿಸಿದರು. ಶಾಸಕ ಕೃಷ್ಣಪ್ಪ ಸೇರಿದಂತೆ ಹಲವು ಗಣ್ಯರು ರಥೋತ್ಸವದಲ್ಲಿ ಭಾಗಿಯಾಗಿ ದೇವರ ಆಶೀರ್ವಾದ ಪಡೆದರು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ತಟ್ಟಗುಪ್ಪೆಯ ಚಿಕ್ಕಲಿಂಗಶಾಸ್ತ್ರಿ ಕೆರೆಯನ್ನು 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ](https://akshayatv.com/?p=1705): ಯಶವಂತಪುರ ವಿಧಾನಸಭಾ ಕ್ಷೇತ್ರದ ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಗುಪ್ಪೆ ಗ್ರಾಮದ ಚಿಕ್ಕಲಿಂಗ ಶಾಸ್ತ್ರಿ ಕೆರೆಯನ್ನು 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಇಂದು ಚಾಲನೆ ನೀಡಲಾಗಿದೆ ಶಾಸಕರಾದ ಸೋಮಶೇಖರ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಗ್ರಾಮದ ಸುತ್ತಮುತ್ತ ಅಂತರ್ಜಲ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೆರೆಯನ್ನು ಅಭಿವೃದ್ಧಿಪಡಿಸಲು ಇಂದು ಚಾಲನೆ ನೀಡಲಾಗಿದೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಶಾಂತಿಪುರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ](https://akshayatv.com/?p=1701): ಆನೇಕಲ್‌ ತಾಲೂಕಿನ ಶಾಂತಿಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಮೋಹನ್ ಇಂದು ಆಯ್ಕೆಯಾಗಿದ್ದಾರೆ. ಪಂಚಾಯತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಮೋಹನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಿಗೆ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ತಮಗೆ ಮತ ನೀಡಿದ ಎಲ್ಲಾ ಪಂಚಾಯಿತಿ ಸದಸ್ಯರಿಗೆ ಚಂದ್ರಮೋಹನ್ ಧನ್ಯವಾದ ಅರ್ಪಿಸಿದರು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಕಗಲೀಪುರ ಕಾಲೋನಿಯಲ್ಲಿ ನೂತನವಾಗಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ](https://akshayatv.com/?p=1698): ಯಶವಂತಪುರ ವಿಧಾನಸಭಾ ಕ್ಷೇತ್ರದ ಕಗಲಿಪುರ ಕಾಲೋನಿಯಲ್ಲಿ ನೂತನವಾಗಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಶಾಸಕ ಸೋಮಶೇಖ‌ರ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಕಗಲೀಪುರ ಕಾಲೋನಿಯಲ್ಲಿ ಕಳೆದ ಕೆಲವು ವರ್ಷಗಳಿಂದ ರಸ್ತೆ ಹಾಗೂ ಚರಂಡಿ ಸಮಸ್ಯೆಯಿಂದ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗುತ್ತಿತ್ತು. ಹೀಗಾಗಿ ನೂತನವಾಗಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವ ಕಾಮಗಾರಿಗೆ ಶಾಸಕರ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಮರಸೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸಭೆ ಆಯೋಜನೆ. ಗ್ರಾಮಸ್ಥರ ಕುಂದು ಕೊರತೆಗಳ ಚರ್ಚೆ](https://akshayatv.com/?p=1695): ಆನೇಕಲ್‌ ತಾಲೂಕಿನ ಮರಸೂರು ಪಂಚಾಯತಿ ವ್ಯಾಪ್ತಿಯ ನಾಗನಾಯಕನಹಳ್ಳಿ ಗ್ರಾಮದಲ್ಲಿ ಪಂಚಾಯತಿ ವತಿಯಿಂದ ಗ್ರಾಮಸಭೆ ಆಯೋಜನೆ ಮಾಡಲಾಗಿತ್ತು, ಪಂಚಾಯತಿ ಅಧ್ಯಕ್ಷರಾದ ರಮೇಶ್ ರೆಡ್ಡಿ ಗ್ರಾಮ ಸಭೆಗೆ ಚಾಲನೆ ನೀಡಿದರು. ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಭಾಗವಹಿಸಿ ತಮ್ಮ ಗ್ರಾಮಗಳ ಕುಂದು ಕೊರತೆಗಳ ಬಗೆಹರಿಸುವಂತೆ ಮನವಿ ಸಲ್ಲಿಸಿದರು. ಜೊತೆಗೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಗಾಣಿಗರ ಪಾಳ್ಯದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿ ಹಾಗೂ ಗುರುವಂದನ ಕಾರ್ಯಕ್ರಮ, ಮಾಜಿ ಮುಖ್ಯಮಂತ್ರಿ](https://akshayatv.com/?p=1692): ಯಶವಂತಪುರ ವಿಧಾನಸಭಾ ಕ್ಷೇತ್ರದ ಗಾಣಿಗರ ಪಾಳ್ಯದಲ್ಲಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಾಸಕ ಸೋಮಶೇಖರ್ ರವರು ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಶಿವಕುಮಾರ ಸ್ವಾಮೀಜಿಗಳು ನಡೆದು ಬಂದ ದಾರಿ ಹಾಗೂ ಅವರ ತತ್ವ ಆದರ್ಶಗಳು ಇಂದಿನ ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿದೆ. ಎಂದು ಯಡಿಯೂರಪ್ಪ ಸ್ವಾಮೀಜಿಗಳಿಗೆ ನುಡಿ ನಮನ ಸಲ್ಲಿಸಿದರು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಜಿಗಣಿಯ ಲಿಂಕ್ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಬೇಕರಿಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್](https://akshayatv.com/?p=1689): ಆನೇಕಲ್‌ ತಾಲೂಕಿನ ಜಿಗಣಿಯ ಲಿಂಕ್ ರಸ್ತೆಯಲ್ಲಿ ವೇಗವಾಗಿ ಬಂದ ಬಿಎಂಟಿಸಿ ಬಸ್ ನಿಯಂತ್ರಣ ಕಳೆದುಕೊಂಡು ಬೇಕರಿಗೆ ಡಿಕ್ಕಿ ಹೊಡೆದಿದೆ, ಪರಿಣಾಮ ಬಸ್‌ ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಜಿಗಣಿಯಿಂದ ಬನ್ನೇರುಘಟ್ಟ ಮಾರ್ಗವಾಗಿ ಹೋಗುತ್ತಿದ್ದ ಎಲೆಕ್ನಿಕ್ ಬಿಎಂಟಿಸಿ ಬಸ್‌ ಲಿಂಕ್ ರಸ್ತೆಯ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಬೇಕರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಗುಡ್ನಳ್ಳಿ ಬಳಿ ಗಾಳಿ ಮಳೆಯಿಂದ ಮುಖ್ಯರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ](https://akshayatv.com/?p=1686): ಆನೇಕಲ್‌ ತಾಲೂಕಿನ ಗುಡ್ಡಳ್ಳಿ ಗ್ರಾಮದಲ್ಲಿ ಗಾಳಿ ಸಹಿತ ಭಾರಿ ಮಳೆಯಿಂದ ಬೃಹತ್ ಗಾತ್ರದ ಹುಣಸೇ ಮರವೊಂದು ಹೊಸೂರು ಮುಖ್ಯ ರಸ್ತೆಗೆ ಉರುಳಿ ಬಿದ್ದಿದೆ. ಪರಿಣಾಮ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆನೇಕಲ್‌ ನಿಂದ ಹೊಸೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಮರ ಬಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನ ತೆರವುಗೊಳಿಸಲು ಕಾರ್ಯಾಚರಣೆ ನಡೆಸಿದರು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತಂತೆ ಶಾಲಾ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ](https://akshayatv.com/?p=1683): ಆನೇಕಲ್‌ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣೆ ಕುರಿತಂತೆ ಜಾಗೃತಿ ಕಾರ್ಯಕ್ರಮ ರೂಪಿಸಲಾಗಿತ್ತು. ಮೃಗಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಸೂರ್ಯಸೇನ್ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವನ್ಯಜೀವಿಗಳ ಸಂರಕ್ಷಣೆಯಿಂದ ಪರಿಸರಕ್ಕೆ ಉಂಟಾಗುವ ಲಾಭದ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವನ್ಯಜೀವಿಗಳ ಜೀವನ ಶೈಲಿ ಹಾಗೂ ಅವುಗಳನ್ನು ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಬಗ್ಗೆಯೂ ಅರಿವು ಮೂಡಿಸಲಾಯಿತು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಬೆಟ್ಟದಾಸನಪುರದಲ್ಲಿ ಶ್ರೀ ತಿಮ್ಮರಾಯಸ್ವಾಮಿ ಹಾಗೂ ಕಾಶಿ ವಿಶ್ವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ](https://akshayatv.com/?p=1678): ಬೆಂಗಳೂರು ದಕ್ಷಿಣ ಕ್ಷೇತ್ರದ ಬೆಟ್ಟದಾಸನಪುರ ಗ್ರಾಮದಲ್ಲಿ ಶ್ರೀ ಕೋಟೆ ತಿಮ್ಮರಾಯಸ್ವಾಮಿ ಹಾಗೂ ಕಾಶಿ ವಿಶ್ವೇಶ್ವರ ಸ್ವಾಮಿಯ ಅದ್ದೂರಿ ಜಾತ್ರಾ ಮಹೋತ್ಸವ ಆಯೋಜನೆ ಮಾಡಲಾಗಿತ್ತು ವಿಜೃಂಭಣೆಯಿಂದ ನಡೆದ ಜಾತ್ರಾ ಮಹೋತ್ಸವದಲ್ಲಿ ಗ್ರಾಮಸ್ಥರಿಂದ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ ಆಯೋಜನೆ ಮಾಡಲಾಗಿತ್ತು. ಗ್ರಾಮದೇವತೆಗಳನ್ನ ಪಲ್ಲಕ್ಕಿಯಲ್ಲಿ ಕೂರಿಸಿ ಊರಿನ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಮಹಿಳೆಯರು ಆರತಿಗಳನ್ನು ಹೊತ್ತು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವ ಅಂಗವಾಗಿ ವೀರಗಾಸೆ ಕುಣಿತ, ಕೀಲು ಕುದುರೆ, ಸೇರಿದಂತೆ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಕುರಿತು ಮಾತನಾಡಿದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣಸ್ವಾಮಿ ಬೆಟ್ಟದಾಸನಪುರ ಗ್ರಾಮದಲ್ಲಿ ಈ ಬಾರಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ಕೈಗೊಳ್ಳಲಾಗಿದೆ. ಜಾತಿ ಭೇದ ಮರೆತು ಗ್ರಾಮಸ್ಥರೆಲ್ಲ ಒಟ್ಟಾಗಿ ಸೇರಿ ಶ್ರೀ ತಿಮ್ಮರಾಯಸ್ವಾಮಿ ಹಾಗೂ ಕಾಶಿ ವಿಶ್ವೇಶ್ವರ ಸ್ವಾಮಿಯ ಜಾತ್ರೆಯನ್ನು ನಡೆಸಿದ್ದಾರೆ. ಜೊತೆಗೆ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವವನ್ನು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿ ಭಕ್ತಾದಿಗಳಿಗೆ ಅನ್ನದಾಸೋಹ ಕಾರ್ಯಕ್ರಮವನ್ನು... - [ಅಂಜನಾ ನಗರದಲ್ಲಿ ಜಲ ಮಂಡಳಿ ವತಿಯಿಂದ ನೂತನ ಒಳಚರಂಡಿ ಕಾಮಗಾರಿಗೆ ಚಾಲನೆ](https://akshayatv.com/?p=1674): ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ನಲ್ಲಿರುವ ಅಂಜನಾ ನಗರದಲ್ಲಿ ನೂತನ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜಾತಕ ಸೋಮಶೇಖರ್ ಹಾಗೂ ಸ್ಥಳೀಯ ನಿವಾಸಿಗಳು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಅಂಜನಾ ನಗರದಲ್ಲಿ ಒಳಚರಂಡಿ ಇಲದೇ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗುತಿತು. ಹೀಗಾಗಿ ಜಲ ಮಂಡಳಿ ವತಿಯಿಂದ ನೂತನ ಒಳಚರಂಡಿ ನಿರ್ಮಿಸುವ ಕಾಮಗಾರಿಗೆ ಶಾಸಕರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಬಳ್ಳೂರಿನಲ್ಲಿ ಕಿಡಿಗೇಡಿಗಳಿಂದ ಅಂಬೇಡ್ಕ‌ರ್ ಪುತ್ಥಳಿಗೆ ಹಾನಿ](https://akshayatv.com/?p=1671): ಆನೇಕಲ್‌ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ತಳಿಯ ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಹೀಗಾಗಿ ಬಳ್ಳೂರು ಗ್ರಾಮ ಪಂಚಾಯಿತಿ ಮುಂಭಾಗ ದಲಿತ ಸಂಘಟನೆಗಳ ಮುಖಂಡರು ಇಂದು ಪ್ರತಿಭಟನೆ ನಡೆಸಿದರು. ಜನತಾ ಕಾಲೋನಿಯಲೊರುವ 8 ಅಡಿ ಎತ್ತರದ ಪ್ರತಿಮೆಯನ್ನ ಕಿಡಿಗೇಡಿಗಳು ಕಲ್ಲಿನಿಂದ ಹೊಡೆದು ಮೂರ್ತಿಯನ್ನ ವಿರೂಪ ಗೊಳಿಸಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ದಲಿತ ಮುಖಂಡರು ಕಿಡಿಕಾರಿದರು. ಕೂಡಲೇ ಕೃತ್ಯ ಎಸಗಿರುವ ಹಿಡಿಗೇಡಿಗಳನ್ನು ಬಂಧಿಸಬೇಕು ಎಂದು ಮುಖಂಡರು ತಿಳಿಸಿದರು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಕೋಣನಕುಂಟೆಯಲ್ಲಿ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ](https://akshayatv.com/?p=1668): ಬೆಂ. ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಣನಕುಂಟೆಯಲ್ಲಿ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕ ಕೃಷ್ಣಪ್ಪ ಹಾಗೂ ಸ್ಥಳೀಯ ಮುಖಂಡರು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಕೋಣನಕುಂಟೆ ಕ್ರಾಸ್ ನಿಂದ ಉತ್ತರಹಳ್ಳಿವರೆಗೂ ಮುಖ್ಯರಸ್ತೆ ಸಂಪೂರ್ಣವಾಗಿ ಹಾಳಾಗಿತ್ತು. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿಗೆ ಶಾಸಕ ಕೃಷ್ಣಪ್ಪ ಇಂದು ಭೂಮಿ ಪೂಜೆ ನೆರವೇರಿಸಿದರು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಆನೇಕಲ್ ನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಗೌಡ ಆತ್ಮಹತ್ಯೆ ಪ್ರಕರಣ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು](https://akshayatv.com/?p=1664): ಆನೇಕಲ್‌ ಪಟ್ಟಣದಲ್ಲಿ ಏಪ್ರಿಲ್ 18ರಂದು ನಡೆದಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನ ಇಂದು ಆನೇಕಲ್‌ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಗೌಡ ಹಾಗೂ ಹರೀಶ್ ಬಂಧಿತ ಆರೋಪಿಗಳು, ಪ್ರವೀಣ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಸಿ ವಿಡಿಯೋ ತನಗೆ ಉಂಟಾಗಿರುವ ಕಿರುಕುಳದ ಬಗ್ಗೆ ವಿವರವಾಗಿ ವಿಡಿಯೋ ಮಾಡಿ ಫೇಸ್ಪುಕ್ ನಲ್ಲಿ ಪೋಸ್ಟ್ ಮಾಡಿದ್ದ. ಹೀಗಾಗಿ ಕೊಲೆ ಆರೋಪಿಗಳಾದ ಕಿರಣ್ ಹಾಗೂ ಹರೀಶ್ ಎಂಬುವರನ್ನು ಇಂದು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಅಲ್ಲಾಳಸಂದ್ರದಲ್ಲಿ ವಾಜಪೇಯಿ ಈಜುಕೊಳ ಉದ್ಘಾಟನೆ](https://akshayatv.com/?p=1661): ಯಲಹಂಕ ವಿಧಾನಸಭಾ ಕ್ಷೇತ್ರದ ಅಲ್ಲಾಳಸಂದ್ರ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ಈಜುಕೊಳವನ್ನು ಉದ್ಘಾಟನೆ ಮಾಡಲಾಯಿತು. ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವನಾಥ್ ಈಜುಕೊಳವನ್ನು ಲೋಕಾರ್ಪಣೆ ಮಾಡಿದರು ಈ ಭಾಗದಲ್ಲಿ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯರು ಹಲವು ಬಾರಿ ಶಾಸಕರಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಈಜುಕೊಳವನ್ನು ನಿರ್ಮಿಸಿ ಶಾಸಕರ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಗಿದೆ ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ವಿ.ಗೊಲ್ಲಹಳ್ಳಿ ಗ್ರಾಮದಲ್ಲಿ ಫಲಾನುಭವಿಗಳಿಗೆ ಉಚಿತವಾಗಿ ಪಂಪು ಮೋಟಾರ್ ವಿತರಿಸಿದ ಶಾಸಕ ಸೋಮಶೇಖರ್](https://akshayatv.com/?p=1658): ಯಶವಂತಪುರ ವಿಧಾನಸಭಾ ಕ್ಷೇತ್ರದ ವಿ.ಗೊಲ್ಲಹಳ್ಳಿ ಗ್ರಾಮದಲ್ಲಿ ಫಲಾನುಭವಿಗಳಿಗೆ ಉಚಿತವಾಗಿ ಪಂಪು ಮೊಟಾರು ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಸೋಮಶೇಖರ್ ಚಾಲನೆ ನೀಡಿದರು. ಆದಿಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ರೈತರ ವ್ಯವಸಾಯಕ್ಕೆ ಅನುಕೂಲವಾಗುವಂತೆ ಉಚಿತವಾಗಿ ಬೋರ್ ವೆಲ್ ಕೊರೆಸಿ, ಇಂದು ಪಂಪು ಮೋಟಾ‌ರ್ ವಿತರಣೆ ಮಾಡಲಾಯಿತು. ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಾಗೂ ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಹೊಂಗಸಂದ್ರದಲ್ಲಿ ಸೀತಾರಾಮ ಸಮೇತ ಶ್ರೀ ವೀರಾಂಜನೇಯ ಸ್ವಾಮಿಯ ಅದ್ದೂರಿ ಬ್ರಹ್ಮರಥೋತ್ಸವ](https://akshayatv.com/?p=1655): ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೊಂಗಸಂದ್ರ ಗ್ರಾಮದಲ್ಲಿ ಸೀತಾರಾಮ ಸಮೇತ ಶ್ರೀ ವೀರಾಂಜನೇಯ ಸ್ವಾಮಿಯ ಅದ್ದೂರಿ ಬ್ರಹ್ಮರಥೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು. ಶಾಸಕರಾದ ಸತೀಶ್‌ ರೆಡ್ಡಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು. ಅಲಂಕೃತ ರಥದಲ್ಲಿ ದೇವರ ಮೂರ್ತಿಯನ್ನ ಕೂರಿಸಿ ಊರಿನ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಾವಿರಾರು ಭಕ್ತಾದಿಗಳು ರಥವನ್ನು ಎಳೆದು ತಮ್ಮ ಕೋರಿಕೆಗಳನ್ನ ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಬಂದಿದ್ದ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ಸೇರಿದಂತೆ ಅನ್ನದಾಸೋಹ ಕಾರ್ಯಕ್ರಮ ನೆರವೇರಿಸಲಾಯಿತು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಫೇಸ್‌ಬುಕ್‌ ವಿಡಿಯೋ ಮಾಡಿ ಬಿಜೆಪಿ ಕಾರ್ಯಕರ್ತನೊಬ್ಬ ನೇಣು ಬಿಗಿಸಿಕೊಂಡು ಆತ್ಮಹತ್ಯೆ](https://akshayatv.com/?p=1652): ಫೇಸ್‌ಬುಕ್ ವಿಡಿಯೋ ಮಾಡಿ ಬಿಜೆಪಿ ಕಾರ್ಯಕರ್ತನೊಬ್ಬ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನೇಕಲ್ ಪಟ್ಟಣದ ಕೃಷಿ ಇಲಾಖೆ ಪಕ್ಕದಲ್ಲಿರುವ ಮರದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಎಂಬಾತನ ಮೃತ ದೇಹದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಫೇಸ್ಬುಕ್ ವಿಡಿಯೋದಲ್ಲಿ ತಾನು ಒಬ್ಬರಿಗೆ ಸಾಲ ನೀಡಿದ್ದು ಸಾಲ ವಾಪಸ್ಸು ಕೇಳಿದ ಹಿನ್ನೆಲೆಯಲ್ಲಿ ಕೆಲವರು ಪ್ರವೀಣ್ ಗೌಡ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಆನೇಕಲ್ ಪುರಸಭೆಯ ಸದಸ್ಯರಾದ ಭಾಗ್ಯ ಶ್ರೀನಿವಾಸ್ ಬಾಬು, ಸಮಂದೂರು ಗ್ರಾಮದ ಕಿರಣ್ ಗೌಡ, ದೊಡ್ಡ ಹಾಗಡೆ ಮಧು ಗೌಡ, ಆನೇಕಲ್ ಬಿಜೆಪಿ ಮಂಡಲ ಅಧ್ಯಕ್ಷರಾದ ಮುನಿರಾಜು ಗೌಡ, ಭಾಸ್ಕರ್, ಹರೀಶ್, ಸರವಣ ಸೇರಿದಂತೆ ಹಲವರು ಹಣಕಾಸಿನ ವಿಚಾರವಾಗಿ ಹಲ್ಲೆ ಮಾಡಿರುವುದಾಗಿ ವಿಡಿಯೋದಲ್ಲಿ ಪ್ರವೀಣ್ ಗೌಡ ಹೇಳಿಕೊಂಡಿದ್ದಾನೆ. ಪ್ರವೀಣ್ ತಂದೆ ಸಹ ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಪ್ರವೀಣ್ ತನ್ನ ತಾಯಿ ಹಾಗೂ ತಂಗಿಯ ಜೊತೆ ಆನೇಕಲ್ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಇನ್ನು ಪ್ರವೀಣ್ ತನ್ನ ಸಾವಿಗೆ ನಾಲ್ವರು ಪ್ರಮುಖ ಕಾರಣ... - [ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಅಪಘಾತ](https://akshayatv.com/?p=1649): ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಅಪಘಾತ ಸಂಭವಿಸಿದೆ. ನಿಯಂತ್ರಣ ಕಳೆದುಕೊಂಡು ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಗಾಯವಾಗಿದ್ದ ಬೈಕ್ ಸವಾರನನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆನೇಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಕುರಿತಂತೆ ವೈದ್ಯಕೀಯ ಸಿಬ್ಬಂದಿಗಳಿಗೆ ಅಗ್ನಿಶಾಮಕ ದಳದಿಂದ ಜಾಗೃತಿ ಕಾರ್ಯಕ್ರಮ](https://akshayatv.com/?p=1646): ಆನೇಕಲ್‌ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗೆ ಅಗ್ನಿ ಅವಘಡ ಕುರಿತಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಗ್ನಿಶಾಮಕ ದಳದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಿಬ್ಬಂದಿಗಳು ಅಗ್ನಿ ಅವಘಡ ಉಂಟಾದ ಸಮಯದಲ್ಲಿ ಯಾವ ರೀತಿ ಪ್ರತಿಕ್ರಿಯಿಸಬೇಕು ಹಾಗೂ ಅಗ್ನಿ ಅವಘಡದಿಂದ ಯಾವ ರೀತಿ ಪಾರಾಗಬೇಕು ಎಂಬ ಬಗ್ಗೆ ಅರಿವು ಮೂಡಿಸಲಾಯಿತು. ಜೊತೆಗೆ ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ಬೆಂಕಿಯನ್ನು ಯಾವ ರೀತಿ ನಂದಿಸಬೇಕು ಎಂಬ ಬಗ್ಗೆ ತಿಳಿವಳಿಕೆ ಮೂಡಿಸಲಾಯಿತು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಆನೇಕಲ್‌ ಪುರಸಭಾ ಸಭಾಂಗಣದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಕಿಸಾನ್ ಸಂಘದ ಸದಸ್ಯರ ಸಭೆ](https://akshayatv.com/?p=1643): ಆನೇಕಲ್‌ ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಆನೇಕಲ್‌ ತಹಶಿಲ್ಪಾ‌ರ್ ಶಶಿಧ‌ರ್ ಮಾಡ್ಯಾಳ್‌ ನೇತೃತ್ವದಲ್ಲಿ ಕಿಸಾನ್ ಸಂಘದ ಸದಸ್ಯರ ಸಭೆ ನಡೆಸಲಾಯಿತು. ಭಾರತೀಯ ಕಿಸಾನ್ ಸಂಘದ ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ರೈತರು ಸಭೆಯಲ್ಲಿ ಭಾಗವಹಿಸಿದ್ದರು. ತಾಲೂಕಿನಲ್ಲಿ ಇತ್ತೀಚೆಗೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸರ್ವೆ ಇಲಾಖೆ ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ರೈತರು ಆಕ್ರೋಶ ಹೊರಹಾಕಿದರು. ಸಾಧ್ಯವಾದಷ್ಟು ಬೇಗ ರೈತರ ಸಂಕಷ್ಟಗಳಿಗೆ ಪರಿಹಾರ ದೊರಕಿಸಿ ಕೊಡುವುದಾಗಿ ತಹಶಿಲ್ದಾ‌ರ್ ಭರವಸೆ ನೀಡಿದರು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಮಾರತ್‌ಹಳ್ಳಿಯಲ್ಲಿ ಶಾಸಕಿ ಮಂಜುಳಾ ಲಿಂಬಾವಳಿ ನೇತೃತ್ವದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ](https://akshayatv.com/?p=1640): ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತ್‌ ಹಳ್ಳಿಯಲ್ಲಿ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಶಾಸಕಿ ಮಂಜುಳಾ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಸಭೆ ನಡೆಸಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆಯಲಾಯಿತು. ಜೊತೆಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಇದೆ ವೇಳೆ ಸೂಚನೆ ನೀಡಲಾಯಿತು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಆನೇಕಲ್‌ ಪಟ್ಟಣದಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವರ ಒಣ ಕರಗ ಮಹೋತ್ಸವ](https://akshayatv.com/?p=1637): ಆನೇಕಲ್‌ ಪಟ್ಟಣದ ಐತಿಹಾಸಿಕ ಶ್ರೀ ಧರ್ಮರಾಯಸ್ವಾಮಿ ದೇವರ ಒಣಕರಗ ಮಹೋತ್ಸವ ಇಂದು ಮುಂಜಾನೆ ವಿಜೃಂಭಣೆಯಿಂದ ನೆರವೇರಿತು. ಮುಂಜಾನೆ 3 ಗಂಟೆಗೆ ದೇವಾಲಯದಿಂದ ಹೊರಟ ಒಣಕರಗ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ಭಕ್ತಾದಿಗಳು ಮಲ್ಲಿಗೆ ಹೂಗಳನ್ನು ಹಾಕಿ ಕರಗಕ್ಕೆ ನಮನ ಸಲ್ಲಿಸಿದರು. ಜೊತೆಗೆ ಹಲವು ಪ್ರಮುಖ ವೃತ್ತಗಳಲ್ಲಿ ನಾದಸ್ವರಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕರಗ ಭಕ್ತಾದಿಗಳ ಭಕ್ತಿ ಭಾವಕ್ಕೆ ಕಾರಣವಾಯಿತು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಗೊಟ್ಟಿಗೆರೆಯಲ್ಲಿ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ](https://akshayatv.com/?p=1634): ಬೆಂ. ದಕ್ಷಿಣ ವಿಧಾನಸಭಾ ಕ್ಷೇತ್ರದ ಗೊಟ್ಟಿಗೆರೆಯಲ್ಲಿ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕ ಕೃಷ್ಣಪ್ಪ ಹಾಗೂ ಸ್ಥಳೀಯ ಮುಖಂಡರು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಗೊಟ್ಟಿಗೆರೆಯ ಉದ್ಯಾನವನ ನಿರ್ವಹಣೆ ಇಲ್ಲದೇ ಹಾಳಾಗಿತ್ತು. ಹೀಗಾಗಿ ಇಲ್ಲಿನ ಸ್ಥಳೀಯರ ಒತ್ತಾಯದ ಮೇರೆಗೆ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಶಾಸಕರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಬೇಗೂರಿನ ಐತಿಹಾಸಿಕ ಶ್ರೀ ನಾಗೇಶ್ವರ ಸ್ವಾಮಿ ದೇವಾಲಯದಲ್ಲಿ ಅದ್ದೂರಿ ಬ್ರಹ್ಮರಥೋತ್ಸವ](https://akshayatv.com/?p=1631): ಬೆಂ. ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರು ಸಮೀಪವಿರುವ ಐತಿಹಾಸಿಕ ಶ್ರೀ ನಾಗೇಶ್ವರ ಸ್ವಾಮಿ ದೇವಾಲಯದಲ್ಲಿ ಅದ್ದೂರಿ ಬ್ರಹ್ಮರಥೋತ್ಸವ ಇಂದು ಆಯೋಜಿಸಲಾಗಿತ್ತು. ಅಲಂಕೃತ ರಥದಲ್ಲಿ ದೇವರನ್ನ ಕೂರಿಸಿ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಶಾಸಕ ಕೃಷ್ಣಪ್ಪ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತಾದಿಗಳು ದೇವರ ರಥವನ್ನು ಎಳೆದು ತಮ್ಮ ಕೋರಿಕೆಗಳನ್ನ ಈಡೇರಿಸುವಂತೆ ಮನಸಾರೆ ಪ್ರಾರ್ಥಿಸಿದರು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಸೊಮಸುಂದರಪಾಳ್ಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ](https://akshayatv.com/?p=1628): ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸೋಮಸುಂದರ ಪಾಳ್ಯದಲ್ಲಿ ನೂತನವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಹಾಗೂ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಇಲ್ಲಿನ ಸುರಕ್ಷಾ ಜಂಕ್ಷನ್ ಬಳಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಜರಗನಹಳ್ಳಿಯಲ್ಲಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ](https://akshayatv.com/?p=1624): ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜರಗನಹಳ್ಳಿಯಲ್ಲಿ ನೂತನವಾಗಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಈ ಒಂದು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಜರಗನಹಳ್ಳಿ ಸಮೀಪವಿರುವ ಇಂಚರ ಹೋಟೆಲ್ ಜಂಕ್ಷನ್ ಬಳಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ವಾಹನಗಳು ಓಡಾಡಲು ತೀವ್ರ ತೊಂದರೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ವಪ್ನ ಬುಕ್ ಹೌಸ್ ನ 24ನೇ ಶಾಖೆ ಉದ್ಘಾಟನೆ](https://akshayatv.com/?p=1621): ಎಲೆಕ್ಟ್ರಾನಿಕ್ ಸಿಟಿ ಸಮೀಪವಿರುವ ಎಂ5 ಮಾಲ್ ನಲ್ಲಿ ಪ್ರಸಿದ್ಧ ಸ್ವಪ್ನ ಬುಕ್ ಹೌಸ್‌ನ 24ನೇ ಶಾಖೆ ಉದ್ಘಾಟನೆಯಾಗುವ ಮೂಲಕ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಪುಸ್ತಕ ಪ್ರೇಮಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಇತ್ತೀಚಿಗೆ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅದಕ್ಕೆ ಪೂರಕವಾಗಿ ಉತ್ತಮ ಪುಸ್ತಕಗಳನ್ನು ಓದುಗರಿಗೆ ಒದಗಿಸುವ ಹಿತದೃಷ್ಟಿಯಿಂದ ಸ್ವಪ್ನ ತನ್ನ 24 ನೇ ಶಾಖೆಯಲ್ಲಿ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತೆರೆಯುವ ಮೂಲಕ ಓದುಗರ ಗಮನವನ್ನ ತಮ್ಮತ್ತ ಸೆಳೆಯುವಂತೆ ಮಾಡಿದೆ ಸಪ್ನ ಬುಕ್‌ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಮಾತನಾಡಿ, ಸಪ್ನ ಬುಕ್‌ಹೌಸ್ ಮಕ್ಕಳು ವಿದ್ಯಾರ್ಥಿಗಳು ಒಳಗೊಂಡಂತೆ ಎಲ್ಲ ರೀತಿಯ ಓದುಗರ ಸದಾಭಿರುಚಿಗೆ ಅನುಗುಣವಾಗಿ ಪುಸ್ತಕಗಳು, ಸ್ಟೇಷನರಿ, ಕ್ರೀಡಾ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದಕ್ಕೆ ಪೂರಕವಾಗಿ ಸಪ್ನ ಬುಕ್ ಹೌಸ್ ಕೂಡ ಹೊಸ ಲೇಖಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ನಿರತವಾಗಿದೆ. ಬೆಂಗಳೂರು... - [ಅತ್ತಿಬೆಲೆ ಸಮೀಪವಿರುವ ಗೆಸ್ಟ್ ಲೈನ್ ಬಳಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ](https://akshayatv.com/?p=1618): ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪವಿರುವ ಗೆಸ್ಟ್ ಲೈನ್ ಬಳಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿ ಬಾಬಾ ಸಾಹೇಬರ ತ್ಯಾಗ ಹಾಗೂ ಹೋರಾಟಗಳ ಕುರಿತು ನುಡಿ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಕುರಿತು ಮಾತನಾಡಿದ ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ರಾಜ್ಯಾಧ್ಯಕ್ಷ ಗೌರೀಶ್ ಅತ್ತಿಬೆಲೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗೆಸ್ಟ್ ಲೈನ್ ಬಳಿ ಪ್ರತಿ ವರ್ಷ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ. ಅಶೋಕ್ ಶ್ರೀನಿವಾಸ್ ಹಾಗೂ ರಾಜಣ್ಣ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಂಬೇಡ್ಕರ್ ರವರು ಸಮ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟು ಸಂವಿಧಾನವನ್ನು ರಚನೆ ಮಾಡಿದ್ದಾರೆ. ಹೀಗಾಗಿ ಅವರ ಜಯಂತಿಯನ್ನ ಸಾಮಾಜಿಕ ಕಾರ್ಯಕ್ರಮಗಳ ಜೊತೆ ಇಂದು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದರು ನೆರಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಾಮಸ್ವಾಮಿ ಮಾತನಾಡಿ ಕಳೆದ 30 ವರ್ಷಗಳಿಂದ ಗೆಸ್ಟ್ ಲೈನ್... - [ಲಾರಿ ಮುಷ್ಕರ ಹಿನ್ನೆಲೆ, ಅತ್ತಿಬೆಲೆಯಲ್ಲಿ ಲಾರಿ ಅಸೋಸಿಯೇಷನ್‌ ಅಧ್ಯಕ್ಷ ಷಣ್ಮುಗಪ್ಪ ನೇತೃತ್ವದಲ್ಲಿ ಪ್ರತಿಭಟನೆ](https://akshayatv.com/?p=1614): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದಲ್ಲಿ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಹೀಗಾಗಿ ರಾಜ್ಯದ ಗಡಿಭಾಗ ಅತ್ತಿಬೆಲೆಯಲ್ಲಿ ಲಾರಿ ಅಸೋಸಿಯೇಷನ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಅತಿಬೆಲೆಯ ಎಆರ್‌ಟಿಓ ಕಚೇರಿ ಮುಂಭಾಗ ಅಸೋಸಿಯೇಷನ್‌ ಅಧ್ಯಕ್ಷ ಷಣ್ಮುಗಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಲಾರಿ ಮಾಲೀಕರ ನ್ಯಾಯಯುತ ಬೇಡಿಕೆಗಳನ್ನ ಸರ್ಕಾರ ಈ ಕೂಡಲೇ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಷಣ್ಮುಗಪ್ಪ ಎಚ್ಚರಿಕೆ ನೀಡಿದರು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಆನೇಕಲ್ ನಲ್ಲಿ ಶ್ರೀ ದೌಪದಿ ದೇವಿ ಹಾಗೂ ಧರ್ಮರಾಯಸ್ವಾಮಿ ದೇವರ ಪಲಕ್ಕಿ ಉತ್ಸವ](https://akshayatv.com/?p=1611): ಆನೇಕಲ್‌ ಪಟ್ಟಣದ ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀ ದೌಪದಿ ದೇವಿ ಹಾಗೂ ಧರ್ಮರಾಯಸ್ವಾಮಿ ದೇವರ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯರಸ್ತೆಗಳಲ್ಲಿ ದೇವರಿಗೆ ಪುಷ್ಪಾರ್ಚನೆಯನ್ನು ಸಲ್ಲಿಸಿ ತಮ್ಮ ಕೋರಿಕೆಗಳನ್ನ ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ಕೋಲಾಟ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಇದೇ ವೇಳೆ ನಡೆಸಲಾಯಿತು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಬೆಂಗಳೂರಿನಲ್ಲಿ ಸಿಐಟಿಯು ರಾಜ್ಯ ಸಮಾವೇಶ ಆಯೋಜನೆ](https://akshayatv.com/?p=1608): ಬೆಂಗಳೂರಿನಲ್ಲಿ ಸಿಐಟಿಯು ವತಿಯಿಂದ ಇಂದು ರಾಜ್ಯ ಸಮಾವೇಶ ಆಯೋಜನೆ ಮಾಡಲಾಗಿತ್ತು. ರಾಜ್ಯದ ವಿವಿಧ ಜಿಲೆಗಳ ಸಿಐಟಿಯು ಮುಖಂಡರು ಹಾಗೂ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಮೇ 20 ರಂದು ಸಿಐಟಿಯು ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಕೆಲವು ಮಹತ್ವದ ವಿಚಾರಗಳ ಚರ್ಚೆ ನಡೆಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ ವಿರುದ್ಧ ಮುಷ್ಕರ ನಡೆಸುತ್ತಿದ್ದು ಎಲ್ಲರೂ ಮುಷ್ಕರಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಲಾಯಿತು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಪಟ್ಟಣದ ಸಂತೆ ಬೀದಿಯಲ್ಲಿ ಕೋಟೆ ಜಗಳ ಐತಿಹಾಸಿಕ ಕಾರ್ಯಕ್ರಮ](https://akshayatv.com/?p=1605): ಆನೇಕಲ್‌ ಪಟ್ಟಣದ ಸಂತೆ ಬೀದಿಯಲ್ಲಿ ಐತಿಹಾಸಿಕ ಕೋಟೆ ಜಗಳ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು. ಕರಗ ಮಹೋತ್ಸವ ಅಂಗವಾಗಿ ನಡೆದ ಕೋಟೆ ಜಗಳ ಕಾರ್ಯಕ್ರಮದಲ್ಲಿ ಅಭಿಮನ್ಯು ಚಕ್ರವ್ಯೂಹ ಭೇದಿಸುವ ರೂಪಕವನ್ನು ಪಾತ್ರಧಾರಿಗಳು ಪ್ರದರ್ಶನ ಮಾಡಿದರು. ಅಲ್ಲದೇ ಈ ಧಾರ್ಮಿಕ ಆಚರಣೆಯಲ್ಲಿ ಸಾರ್ವಜನಿಕರು ಹೊಸ ಕೊರತೆ ಹಾಗೂ ಮರದಲ್ಲಿ ಏಟು ತಿನ್ನಲು ಮುಗಿ ಬಿದ್ದ ದೃಶ್ಯ ಕಂಡುಬಂತು. ಏಪ್ರೀಲ್ 15 ಆನೇಕಲ್ ನಲ್ಲಿ ಒಣ ಕರಗ ನಡೆಯಲಿದ್ದು, ದೇವಾಲಯದ ಆಡಳಿತ ಮಂಡಳಿ ವತಿಯಿಂದ ಕೋಟೆ ಜಗಳ ಕಾರ್ಯಕ್ರಮ ನಡೆಸಲಾಯಿತು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಆನೇಕಲ್‌ ಪಟ್ಟಣದ ಅಂಬೇಡ್ಕ‌ರ್ ಪ್ರತಿಮೆ ಮುಂಭಾಗ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು](https://akshayatv.com/?p=1601): ಆನೇಕಲ್‌ ಪಟ್ಟಣದ ಅಂಬೇಡ್ಕ‌ರ್ ಪ್ರತಿಮೆ ಮುಂಭಾಗ ಇಂದು ಪ್ರೇಮಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಅಂಬೇಡ್ಕ‌ರ್ ಜಯಂತಿ ದಿನವೇ ಸಂವಿಧಾನದ ಪೀಠಿಕೆ ಹಾಗೂ ಪಂಚಶೀಲದ ಜೊತೆ ಇಬ್ಬರಿಗೂ ಮದುವೆ ಮಾಡಿಸಲಾಗಿದೆ. ಹೊಳೆನರಸೀಪುರ ಮೂಲದ ಕಿರಣ್ ಹಾಗೂ ಪ್ರಿಯಾಂಕ ಮದುವೆಯಾದ ಪ್ರೇಮಿಗಳು. ಮನೆಯಲ್ಲಿ ಇವರ ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ತಹಶಿಲ್ದಾ‌ರ್ ಹಾಗೂ ಮುಖಂಡರ ಸಮ್ಮುಖದಲ್ಲಿ ಪ್ರೇಮಿಗಳಿಗೆ ಮದುವೆ ಮಾಡಿಸಿ ಶುಭಾಶಯ ಕೋರಲಾಯಿತು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಸಿಂಗಸಂದ್ರ ಸಮೀಪ ಬರುವ ಎಇಸಿಎಸ್‌ ಬಡಾವಣೆಯಲ್ಲಿ ನೂತನ ಆಟದ ಮೈದಾನ ನಿರ್ಮಾಣ ಕಾಮಗಾರಿಗೆ ಚಾಲನೆ](https://akshayatv.com/?p=1598): ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರ ಸಮೀಪ ಬರುವ ಎಇಸಿಎಸ್‌ ಬಡಾವಣೆಯಲ್ಲಿ ನೂತನ ಆಟದ ಮೈದಾನ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಶಾಸಕ ಸತೀಶ್ ರೆಡ್ಡಿ ಹಾಗೂ ಸ್ಥಳೀಯ ನಿವಾಸಿಗಳು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಬಡಾವಣೆಯಲ್ಲಿ ಹಲವು ವರ್ಷಗಳಿಂದ ಆಟದ ಮೈದಾನ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯರು ಮನವಿ ಸಲ್ಲಿಸಿದ್ದರು. ಹೀಗಾಗಿ ನಿವಾಸಿಗಳ ಅನುಕೂಲಕ್ಕಾಗಿ ನೂತನ ಆಟದ ಮೈದಾನ ನಿರ್ಮಾಣಕ್ಕೆ ಶಾಸಕರಾದ ಸತೀಶ್ ರೆಡ್ಡಿ ಇಂದು ಚಾಲನೆ ನೀಡಿದ್ದಾರೆ ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಯಲಹಂಕದಲ್ಲಿ ಅಂಬೇಡ್ಕ‌ರ್ ಜಯಂತಿ ಪ್ರಯುಕ್ತ 1 ಸಾವಿರ ಗಿಡ ನೆಡುವ ಕಾರ್ಯಕ್ರಮ, ಶಾಸಕ ವಿಶ್ವನಾಥ್ ರವರಿಂದ ಚಾಲನೆ](https://akshayatv.com/?p=1595): ಯಲಹಂಕದಲ್ಲಿ ಸಂವಿಧಾನ ಶಿಲ್ಪಿ ಡಾ ಬಿಆ‌ರ್ ಅಂಬೇಡ್ಕ‌ರ್ ಅವರ ಜಯಂತಿ ಅಂಗವಾಗಿ 1 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಶಾಸಕ ವಿಶ್ವನಾಥ್ ಚಾಲನೆ ನೀಡಿದರು. ಯಲಹಂಕ ಕ್ಷೇತ್ರದ 4 ಬಿಬಿಎಂಪಿ ವಾರ್ಡ್ ಗಳಲ್ಲಿ 1 ಸಾವಿರ ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ. ಹೀಗಾಗಿ ಇಂದು ಶಾಸಕರು ಹಾಗೂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಸಮ್ಮುಖದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಚಂದಾಪುರದಲ್ಲಿ ಕುಲ್ಲಕ ಕಾರಣಕ್ಕೆ ಇಬ್ಬರು ಸವಾರರ ನಡುವೆ ಹೊಡೆದಾಟ, ಜಗಳ ಬಿಡಿಸಲು ಸ್ಥಳೀಯರ ಹರಸಾಹಸ](https://akshayatv.com/?p=1590): ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಕುಲ್ಲಕ ಕಾರಣಕ್ಕೆ ಇಬ್ಬರು ಬೈಕ್‌ ಸವಾರರ ನಡುವೆ ಹೊಡೆದಾಟ ನಡೆದಿದೆ. ಬೈಕ್‌ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಶುರುವಾದ ಜಗಳ ದೊಡ್ಡದಾಗಿ ಇಬ್ಬರು ಶರ್ಟ್ ಹರಿದುಕೊಂಡು ಹೊಡೆದಾಡಿಕೊಳ್ಳುವ ಮಟ್ಟಕ್ಕೆ ತಲುಪಿದೆ. ಬಳಿಕ ಸ್ಥಳಿಯರು ಇಬ್ಬರ ಜಗಳವನ್ನು ಬಿಡಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಆನೇಕಲ್ ನಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವರ ಹಸಿ ಕರಗ ಮಹೋತ್ಸವ, ಸಾವಿರಾರು ಭಕ್ತಾದಿಗಳಿಂದ ಕರಗ ವೀಕ್ಷಣೆ](https://akshayatv.com/?p=1587): ಆನೇಕಲ್‌ ಪಟ್ಟಣದ ಐತಿಹಾಸಿಕ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಹಸಿ ಕರಗ ಮಹೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು. ಮುಂಜಾನೆ 4 ಗಂಟೆಗೆ ದೇವಾಲಯದಿಂದ ಹೊರಟ ಹಸಿ ಕರಗ ಆನೇಕಲ್‌ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಕರಗ ಹೋದ ಕಡೆಯಲೆಲ್ಲ ಮಹಿಳೆಯರು ಕರಗಕ್ಕೆ ಮಲ್ಲಿಗೆ ಹೂವು ಹಾಕಿ ಅದ್ದೂರಿಯಾಗಿ ಬರಮಾಡಿಕೊಂಡರು. ನಾದಸ್ವರದ ನಾದಕ್ಕೆ ತಕ್ಕಂತೆ ಕರಗ ಹೆಜ್ಜೆ ಹಾಕಿ ಭಕ್ತಾದಿಗಳ ಭಕ್ತಿ ಭಾವಕ್ಕೆ ಸಾಕ್ಷಿಯಾಯಿತು. ಹಸಿ ಕರಗ ಹಿನ್ನೆಲೆ ದೇವರ ಪಲಕ್ಕಿ ಉತ್ಸವ ಸಹ ಆಯೋಜಿಸಲಾಗಿತ್ತು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಮಾರಣ್ಣ ಬಡಾವಣೆಯಲ್ಲಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ](https://akshayatv.com/?p=1584): ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡಬಿದರಕಲ್ಲು ಸಮೀಪವಿರುವ ಮಾರಣ್ಣ ಬಡಾವಣೆಯಲ್ಲಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕ ಸೋಮಶೇಖ‌ರ್ ಹಾಗೂ ಸ್ಥಳೀಯ ನಿವಾಸಿಗಳು ನೂತನ ಕಾಮಗಾರಿಗೆ ಭೂಮಿಪೂಜೆ ನೆರವೆರಿಸಿದರು. ಮಾರಣ್ಣ ಬಡಾವಣೆಯಲ್ಲಿ ರಸ್ತೆಗಳು ಹಾಳಾಗಿ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗುತ್ತಿತ್ತು. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಎಸ್ ಗೊಲ್ಲಹಳ್ಳಿಯಲ್ಲಿ ಗಣಿಭಾದಿತ ಗ್ರಾಮಸ್ಥರಿಗೆ ಸಹಾಯಧನದ ಚೆಕ್ ವಿತರಣೆ ಮಾಡಿದ ಶಾಸಕ ಎಸ್ ಟಿ ಸೋಮಶೇಖರ್](https://akshayatv.com/?p=1581): ಯಶವಂತಪುರ ವಿಧಾನಸಭಾ ಕ್ಷೇತ್ರದ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್ ಗೊಲ್ಲಹಳ್ಳಿ ಗ್ರಾಮದಲ್ಲಿ ಭಾದಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಸಹಾಯಧನದ ಚೆಕ್‌ ವಿತರಣೆ ಮಾಡಲಾಯಿತು. ಶಾಸಕ ಸೋಮಶೇಖ‌ರ್ ಹಾಗೂ ಚಿಕ್ಕನಹಳ್ಳಿ ಪಂಚಾಯತಿ ಸದಸ್ಯರು ಫಲಾನುಭವಿಗಳಿಗೆ ಚೆಕ್‌ ವಿತರಣೆ ಮಾಡಿದರು. ಗಣಿಭಾಧಿತ ಪ್ರದೇಶಗಳಲ್ಲಿರುವ ಗ್ರಾಮಸ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಂದು ಚೆಕ್‌ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಆನೇಕಲ್‌ ಪಟ್ಟಣದ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ 4 ನೇ ವರ್ಷದ ರಾಜಮುಡಿ ಉತ್ಸವ ಆಯೋಜನೆ](https://akshayatv.com/?p=1578): ಆನೇಕಲ್‌ ಪಟ್ಟಣದ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ 4ನೇ ವರ್ಷದ ರಾಜಮುಡಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ದೇವರಿಗೆ ರಾಜಮುಡಿಯನ್ನು ತೊಡಿಸಿ ದೇವಾಲಯದ ಸುತಲೂ ಪ್ರದಕ್ಷಿಣೆ ಮಾಡಲಾಯಿತು. ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ಸಾವಿರಾರು ಭಕ್ತಾದಿಗಳು ರಾಜಮುಡಿ ಉತ್ಸವಕ್ಕೆ ಸಾಕ್ಷಿಯಾದರು. ಪಂಡ್ರಿ ಮಾಸ್ಟರ್, ವೆಂಕಟ ರಾಜು, ಸೊಸೈಟಿ ಚನ್ನರಾಜು ಕುಟುಂಬದಿಂದ ರಾಜಮುಡಿ ಉತ್ಸವ ನಡೆಸಲಾಯಿತು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಡೆಂಕಣಿಕೋಟೆ ಗ್ರಾಮದಲ್ಲಿ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಿದ್ದ 20ಕ್ಕೂ ಹೆಚ್ಚು ಯುವಕರಿಗೆ ಗಂಭೀರ ಗಾಯ, ಆಸ್ಪತ್ರೆಗೆ ರವಾನೆ](https://akshayatv.com/?p=1575): ಕರ್ನಾಟಕ ತಮಿಳುನಾಡು ಗಡಿಭಾಗದ ಡೆಂಕಣಿಕೋಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಿದ್ದ 20ಕ್ಕೂ ಹೆಚ್ಚು ಯುವಕರಿಗೆ ಹೊರಿ ತಿವಿತದಿಂದ ಗಾಯಗಳಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ 20 ಕ್ಕೂ ಹೆಚ್ಚು ಹೋರಿಗಳು ಹಾಗೂ 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ವೇಳೆ ಹೋರಿಗಳು ಅಡ್ಡಾದಿಡ್ಡಿಯಾಗಿ ಬಂದು ಯುವಕರ ಮೇಲೆ ದಾಳಿ ಮಾಡಿದ ಪರಿಣಾಮ 20ಕ್ಕೂ ಹೆಚ್ಚು ಯುವಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸದೇ ಕ್ರೀಡೆ ಆಯೋಜನೆ ಮಾಡಿದ ಪರಿಣಾಮ ಅವಘಡ ಸಂಭವಿಸಿದೆ. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ನಾಗನಾಯಕನಹಳ್ಳಿಯಲ್ಲಿ ಅಂಬೇಡ್ಕ‌ರ್ ಜನ್ಮದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ](https://akshayatv.com/?p=1572): ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ ಅಂಗವಾಗಿ ನಾಗನಾಯಕನಹಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಅಂಬೇಡ್ಕ‌ರ್ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ನ್ಯಾಯಮೂರ್ತಿಗಳಾದ ವಿಜಯ್ ಕುಮಾ‌ರ್ ಉದ್ಘಾಟಿಸಿದರು. ಮರಸೂರು ಸುತ್ತಮುತ್ತಲ ನೂರಾರು ಮಂದಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಜೊತೆಗೆ ಹಲವು ಯುವಕರು ರಕ್ತದಾನ ಮಾಡುವ ಮೂಲಕ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದರು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ವಿಘ್ನೇಶ್ವರ ನಗರ ಬಡಾವಣೆಯಲ್ಲಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ](https://akshayatv.com/?p=1569): ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ನಲ್ಲಿರುವ ವಿಘ್ನೇಶ್ವರ ನಗರ ಬಡಾವಣೆಯಲ್ಲಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕ ಸೋಮಶೇಖ‌ರ್ ಹಾಗೂ ಸ್ಥಳೀಯ ನಿವಾಸಿಗಳು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಇತ್ತೀಚಿಗೆ ವಿಶ್ವೇಶ್ವರ ನಗರ ಬಡಾವಣೆಯಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ದೊಡ್ಡತೊಗೂರು ಬಳಿ ನೂತನ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ](https://akshayatv.com/?p=1566): ಬೆಂ. ದಕ್ಷಿಣ ವ್ಯಾಪ್ತಿಯ ದೊಡ್ಡ ತೊಗೂರು ಗ್ರಾಮದಲ್ಲಿ ನೂತನವಾಗಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬೆಂ. ದಕ್ಷಿಣ ಶಾಸಕ ಕೃಷ್ಣಪ್ಪ ಹಾಗೂ ಸ್ಥಳೀಯ ಮುಖಂಡರು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ದೊಡ್ಡ ತೊಗೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಕಡೆ ಇತ್ತಿಚೆಗೆ ರಸ್ತೆಗಳು ಹಾಳಾಗಿತ್ತು, ವಾಹನಗಳ ಓಡಾಟಕ್ಕೂ ತೀವ್ರ ತೊಂದರೆ ಉಂಟಾಗುತ್ತಿತ್ತು. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಶಾಸಕರ ನೇತೃತ್ವದಲ್ಲಿ ಇಂದು ನೂತನ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಯಲಹಂಕದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಅದ್ದೂರಿ ಬ್ರಹ್ಮರಥೋತ್ಸವ, ಶಾಸಕ ವಿಶ್ವನಾಥ್ ಸೇರಿದಂತೆ ಗಣ್ಯರು ಭಾಗಿ](https://akshayatv.com/?p=1563): ಯಲಹಂಕ ಸಮೀಪದ ಕೋಟೆ ಬೀದಿಯಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು. ಯಲಹಂಕ ಶಾಸಕ ವಿಶ್ವನಾಥ್ ಸೇರಿದಂತೆ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ದೇವರ ಅಲಂಕೃತ ಮೂರ್ತಿಯನ್ನು ರಥದಲ್ಲಿ ಕೂರಿಸಿ ಊರಿನ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ಭಕ್ತರು ರಥವನ್ನು ಎಳೆದು ಕೋರಿಕೆಗಳನ್ನ ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ರಥೋತ್ಸವ ಅಂಗವಾಗಿ ದೇವರ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ವೈಟ್ ಫಿಲ್ಡ್ ಮುಖ್ಯ ರಸ್ತೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್‌ ಪ್ರತಿಭಟನಾ ಕ್ಯಾಲಿ](https://akshayatv.com/?p=1560): ಮಹದೇವಪುರ ವಿಧಾನಸಭಾ ಕ್ಷೇತ್ರದ ವೈಟ್ ಫೀಲ್ಡ್‌ ಮುಖ್ಯ ರಸ್ತೆಯಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಯೂತ್‌ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಯೂತ್ ಕಾಂಗ್ರೆಸ್‌ ಅಧ್ಯಕ್ಷ ಪ್ರದೀಪ್ ರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜನಸಾಮಾನ್ಯರು ಬಳಸುವ ಅಡುಗೆ ಅನಿಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರದ ತೆರಿಗೆ ಹೆಚ್ಚಾಗಿದ್ದು ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದರು ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. - [ಮಾಯಸಂದ್ರ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿದ ಶ್ರೀ ಧರ್ಮರಾಯಸ್ವಾಮಿ ಒಣ ಕರಗ ಮಹೋತ್ಸವ](https://akshayatv.com/?p=1557): ಆನೇಕಲ್‌ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಶ್ರೀ ಧರ್ಮರಾಯ ಸ್ವಾಮಿ ದೇವರ ಒಣಕರದ ಮಹೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು. ಆನೇಕಲ್ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಒಣ ಕರಗ ಮಹೋತ್ಸವವನ್ನು ವೀಕ್ಷಣೆ ಮಾಡಿದರು. ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿದ ಕರಗಕ್ಕೆ ಮಲ್ಲಿಗೆ ಹೂಗಳ ಸ್ವಾಗತ ಕೋರಲಾಯಿತು. ನಾದಸ್ವರದ ನಾದಕ್ಕೆ ತಕ್ಕಂತೆ ಕರಗ ಹೆಜ್ಜೆ ಹಾಕಿ ಭಕ್ತರ ಭಕ್ತಿ ಭಾವಕ್ಕೆ ಸಾಕ್ಷಿಯಾಯಿತು. ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ.. [comment]: # (Generated by Hostinger Tools Plugin)